BJP : ರಾಜಕೀಯದಲ್ಲಿ ಕಾಂಗ್ರೆಸ್ ಅಂದರೆ ಹೊಡೆದಾಟ, ಬಡಿದಾಟ ಅಂತ ಡಿಕ್ಷನರಿಯಲ್ಲಿ ಬರೆಯಬೇಕು – ಪ್ರಹ್ಲಾದ್ ಜೋಶಿ
ರಾಜಕೀಯದಲ್ಲಿ ಕಾಂಗ್ರೆಸ್ ಅಂದರೆ ಹೊಡೆದಾಟ, ಬಡಿದಾಟ, ಬಡವರಿಗೆ ದ್ರೋಹ ಅಂತ ಡಿಕ್ಷನರಿಯಲ್ಲಿ ಬರೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ವ್ಯಂಗ್ಯವಾಡಿದ್ದಾರೆ..
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ಪಕ್ಷ ನಾವಿಕನಿಲ್ಲದ ದೋಣಿಯಾಗಿದೆ. ಅವರಿಗೆ ರೌಡಿಶೀಟರ್ ಬಗ್ಗೆ ಮಾತನಾಡಲು ಯಾವುದೇ ನೈತಿಕತೆಯಿಲ್ಲ.
ಕಾಂಗ್ರೆಸ್ ನಲ್ಲಿ ಡಿಕೆಶಿ ಮತ್ತು ಮೊಹಮ್ಮದ್ ನಲಪಾಡ್ ಕಥೆ ಎಲ್ಲರಿಗೂ ಗೊತ್ತಿದೆ. ನಡು ರಸ್ತೆಯಲ್ಲಿ ಮರ್ಡರ್ ಮಾಡಲು ಯತ್ನಿಸಿದ ನಲಪಾಡ್ ಅಧ್ಯಕ್ಷರಾದರು. ಆದರೆ ರಕ್ಷಿತ್ ರಾಮಯ್ಯನ ದೂರವಿಟ್ಟಿರು ಎಂದು ಟೀಕೆ ಮಾಡಿದ್ರು.
ಇದೇ ವೇಳೆ ಜನಾರ್ದನ ರೆಡ್ಡಿ ಪಕ್ಷಕ್ಕೆ ಬರುವ ವಿಚಾರವಾಗಿ ಮಾತನಾಡ್ತಾ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವರು ಪಕ್ಷಕ್ಕೆ ಕರೆತರೋದು ಬಿಡೋದು ನಮ್ಮ ಪಕ್ಷದ ನಾಯಕರು ನೋಡಿಕೊಳ್ಳುತ್ತಾರೆ. ಸದ್ಯ ನನ್ನ ಪ್ರಕಾರ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು..








