‘ಸೀತಾ’ ಮಾತೆಗೆ ಅವಮಾನ : ಹತ್ರಾಸ್ ಕೇಸ್ ಗೆ ಹೋಲಿಸಿದ TMC ಸಂಸದನ ವಿರುದ್ಧ ದಾಖಲಾಯ್ತು ಕೇಸ್..!
ಕೋಲ್ಕತ್ತಾ: ಹಿಂದೂ ದೇವತೆ ಸೀತಾ ಮಾತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ TMC ಸಂಸದ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪಶ್ಚಿಮಬಂಗಾಳದ ಬ್ಯಾರಕ್ ಪೋರ್ ನಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂಸದ ಕಲ್ಯಾಣ್ ಬ್ಯಾನರ್ಜಿ, ಸೀತೆಯ ಅಪಹರಣದ ಸಂಗತಿಯನ್ನು ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಹೋಲಿಸಿ ಮಾತನಾಡಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ರು.
ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಡನೆಯಾಗಲಿದೆ ಕಾಗದ ರಹಿತ ಬಜೆಟ್..!
‘ನಾನು ರಾವಣನಿಂದ ಅಪಹರಣಕ್ಕೆ ಒಳಗಾದೆ, ನಿಮ್ಮ ಕೇಸರಿ ಅನುಯಾಯಿಗಳಿಂದ ಅಪಹರಣವಾಗಿದ್ದರೆ ಹತ್ರಾಸ್ ಪ್ರಕರಣದಂತೆಯೇ ನನ್ನ ಹಣೆ ಬರಹವೂ ಆಗುತ್ತಿತ್ತು ಎಂದು ಸದ್ಯದ ಪರಿಸ್ಥಿತಿಯಲ್ಲಿ ಸೀತೆ ರಾಮನಿಗೆ ಹೇಳಬೇಕಾಗಿತ್ತು’ ಎಂದು ಕಲ್ಯಾಣ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ದೇವತೆ ಸೀತಾ ಮಾತೆ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ, ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತೆ ಮಾತನಾಡಿದ್ದಾರೆ ಎಂದು ದೂರಿದ್ದರು. ಇದೀಗ ಬಿಜೆಪಿ ಯುವ ಮೋಚರ್ ಆಶಿಶ್ ಜೈಸ್ವಾಲ್ ಹೌರಾಹ್ ನ ಗೋಲಬರಿ ಪೊಲೀಸ್ ಠಾಣೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








