“ಬಿಜೆಪಿ ಮುಕ್ತ” ಆಗೋ ದಿನಗಳು ದೂರ ಇಲ್ಲ : ಹೆಚ್ ಡಿಕೆ
ಬೀದರ್ : ನಿಮ್ಮ ಉದ್ಧಟತನ ಮುಂದುವರೆದ್ರೆ “ಬಿಜೆಪಿ ಮುಕ್ತ” ಆಗೋ ದಿನಗಳು ದೂರ ಇಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ತಮ್ಮ ಉದ್ಧಟತನ ಬಿಟ್ಟು ಸಾರಿಗೆ ನೌಕರರ ಮನವೊಲಿಸಬೇಕು. ಸಿಎಂ ಆಗಲಿ, ಸಚಿವರಾಗಿ ಯಾರು ಮೇಲಿಂದ ಇಳಿದು ಬಂದಿಲ್ಲ. ಯಾರಿಗೂ ಅಧಿಕಾರ ಶಾಶ್ವತವಲ್ಲ.
ಇವರ ಉದ್ಧಟತನ,ನಡುವಳಿಕೆಗಳು ಮುಂದೆ ದೊಡ್ಡ ಪ್ರಾಯಶ್ಚಿತ್ತವನ್ನು ಅನುಭವಿಸುತ್ತಾರೆ. ಸಾರಿಗೆ ನೌಕರರ ಮನವೊಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಬೇಕಿರುವುದು ಸರ್ಕಾರ ಜವಾಬ್ದಾರಿ ಎಂದು ಹೇಳಿದರು.
ಇದೇ ರೀತಿ ನಿಮ್ಮ ಉದ್ಧಟತನ ಮುಂದುವರೆದ್ರೆ “ಬಿಜೆಪಿ ಮುಕ್ತ” ಆಗೋ ದಿನಗಳು ದೂರ ಇಲ್ಲಾ. ಈ ಉದ್ಧಟತನ ಬಿಟ್ಟು ಮೊದಲು ಸಾರಿಗೆ ನೌಕರ ಸಮಸ್ಯೆಗೆ ಸಿಎಂ,ಸಚಿವರು ಬಗೆಹರಿಸುವ ಕಡೆ ಗಮನಹರಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
7 ಜಿಲ್ಲೆಯ 8 ನಗರದಲ್ಲಿ ನೈಟ್ ಕಫ್ರ್ಯೂ ವಿಚಾರವಾಗಿ ಮಾತನಾಡಿ, ನೈಟ್ ಕಫ್ರ್ಯೂ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತೋ ಗೋತ್ತಿಲ್ಲ. ಈ ನೈಟ್ ಕಫ್ರ್ಯೂ ಎಷ್ಟರ ಮಟ್ಟಿಗೆ ಸಫಲವಾಗುತ್ತೆ ಎನ್ನೋದನ್ನು ಕಾದು ನೋಡೋಣ ಎಂದು ಹೇಳಿದರು.










