‘ಬಿಜೆಪಿ ಗದ್ದೀ ಛೋಡೋ’ – ಅಭಿಯಾನ ನಡೆಸಲು ಕಾಂಗ್ರೆಸ್ ಸಿದ್ಧ
ಉತ್ತರಪ್ರದೇಶ : ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಬಾ ಚುನಾವಣೆ ನಡೆಯಲಿದೆ.. ಕಾಂಗ್ರೆಸ್ , ಬಿಜೆಪಿ , ಇತರೇ ಪಕ್ಷಗಳು ಈಗಲಿಂದಲೇ ಗೆಲುವಿನ ರಣತಂತ್ರ ಹೆಣೆಯೋಕೆ ಶುರು ಮಾಡಿಬಿಟ್ಟಿವೆ.. ಈ ನಡುವೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ‘ಬಿಜೆಪಿ ಗದ್ದೀ ಛೋಡೋ’ ಎಂಬ ಅಭಿಯಾನವನ್ನು ಆಗಸ್ಟ್ 9 ಮತ್ತು 10 ರಂದು ರಾಜ್ಯಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದೆ.
‘ಬಿಜೆಪಿ ಗದ್ದೀ ಛೋಡೋ ಅಭಿಯಾನದ ಪ್ರಯುಕ್ತ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ ನೇತೃತ್ವವನ್ನು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ವಹಿಸಿಕೊಳ್ಳಲಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ತಿಳಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಉತ್ತರ ಪ್ರದೇಶದ ಎಲ್ಲ ಸಮುದಾಯಗಳು ಬಿಜೆಪಿ ಸರ್ಕಾರದ ಆಡಳಿತ ಕಂಡು ತೀವ್ರ ನಿರಾಸೆಯಾಗಿವೆ. ಎಲ್ಲೆಡೆಯೂ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಲ್ಲು ಹೇಳಿದರು.
ಪ್ಲಿಪ್‍ಕಾರ್ಟ್ ಗೆ 10,600 ಕೋಟಿ ರೂಪಾಯಿ ವಹಿವಾಟಿಗೆ ಸಂಬಂಧಿಸಿ ನೊಟೀಸ್ ಜಾರಿ ಮಾಡಿದ ಇಡಿ
ವಿಶ್ವದ 135 ದೇಶಗಳಲ್ಲಿ ಡೆಲ್ಟಾ ರೂಪಾಂತರಿಯ ಅಟ್ಟಹಾಸ..! ವಾರದೊಳಗೆ 200 ಮಿಲಿಯನ್ ಗಡಿ ದಾಟುವ ಸಾಧ್ಯತೆ..!