ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬರಲು ಮತ್ತು ‘ಅಚ್ಛೇ ದಿನ್’ ಎಂಬ ಮಾತು ಸಾಕಾರಗೊಳ್ಳಲು ದಶಕಗಳಿಂದ RSS ಕಾರ್ಯಕರ್ತರು ನಡೆಸಿದ ನಿರಂತರ ಪರಿಶ್ರಮ ಮತ್ತು ಸೈದ್ಧಾಂತಿಕ ಬದ್ಧತೆಯೇ ಪ್ರಮುಖ ಕಾರಣ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ಮಾತ್ರದಿಂದ ಎಲ್ಲವೂ ಸಂಭವಿಸಿಲ್ಲ. ಸಂಘದ ಕಾರ್ಯಕರ್ತರು ಸಮಾಜದಲ್ಲಿ ವರ್ಷಗಳಿಂದ ಮಾಡಿರುವ ಕೆಲಸ, ಮೌಲ್ಯಾಧಾರಿತ ಚಿಂತನೆ ಮತ್ತು ಶಿಸ್ತುಬದ್ಧ ಸಂಘಟನೆ ಇದಕ್ಕೆ ಅಡಿಪಾಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಲು RSS ನೇರ ಪ್ರಯತ್ನ ಮಾಡಿತು ಎಂಬ ನಂಬಿಕೆ ಕೆಲವರಲ್ಲಿ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋಹನ್ ಭಾಗವತ್, ಬಿಜೆಪಿ ಒಂದು ಸ್ವತಂತ್ರ ರಾಜಕೀಯ ಸಂಘಟನೆ ಎಂದರು. RSS ತನ್ನ ಸೈದ್ಧಾಂತಿಕ ಕೆಲಸವನ್ನು ಮಾಡುತ್ತದೆ. ಆದರೆ ಬಿಜೆಪಿ ತನ್ನದೇ ದಾರಿಯಲ್ಲಿ, ತನ್ನದೇ ನಿರ್ಧಾರಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
RSS ಮತ್ತು ಬಿಜೆಪಿ ನಡುವಿನ ಸಂಬಂಧವನ್ನು ವಿವರಿಸಿದ ಅವರು, ಸಂಘದ ಪ್ರೇರಣೆ, ಮೌಲ್ಯಗಳು ಮತ್ತು ಕಾರ್ಯಕರ್ತರ ನೆಲಮಟ್ಟದ ಶ್ರಮವೇ ಬಿಜೆಪಿಯ ಬೆಳವಣಿಗೆಗೆ ಶಕ್ತಿಯಾಗಿದೆ ಎಂದು ಹೇಳಿದರು. ಈ ಮೂಲಕ ರಾಜಕೀಯ ಅಧಿಕಾರಕ್ಕಿಂತಲೂ ದೀರ್ಘಕಾಲದ ಸಂಘಟನೆ ಮತ್ತು ಚಿಂತನೆ ಮುಖ್ಯ ಎಂಬ ಸಂದೇಶವನ್ನು ಅವರು ನೀಡಿದರು.








