BJP : ಪಕ್ಷ ತೊರೆದ ಜನಾರ್ದನ ರೆಡ್ಡಿ – ಅವರ ವೈಯಕ್ತಿಕ ವಿಚಾರ ಎಂದ ಹಾಲಪ್ಪ ಆಚಾರ್
ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ತೊರೆದು ಹೊಸ ಪಕ್ಷ ಕಟ್ಟಿದ ವಿಚಾರವಾಗಿ ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ..
ಬಿಜೆಪಿ ತನ್ನದೇ ಆದ ಸಿದ್ದಾಂತ, ತತ್ವ ಹೊಂದಿದೆ,.. ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಯಾವುದೇ ತೊಂದರೆ ಆಗುವುದಿಲ್ಲ ನಮ್ಮ ಪಕ್ಷಕ್ಕೆ ಜನಾರ್ದನ ರೆಡ್ಡಿ ದುಡಿದಿದ್ದಾರೆ.. ದುಡಿದಿಲ್ಲ ಅಂತಾ ಯಾರೂ ಹೇಳಿಲ್ಲ..
ಆದರೆ ಯಾವ ಕಾರಣಕ್ಕಾಗಿ ಬೇರೆ ಪಕ್ಷ ಕಟ್ಟಿದ್ದಾರೆ ಗೊತ್ತಿಲ್ಲ.. ನಮ್ಮ ಪಕ್ಷದಲ್ಲಿ ಇರಬೇಕಿತ್ತು ಅಂತಾ ನಮ್ಮ ಬಯಕೆ..
ಆದರೆ ಪಕ್ಷ ಬಿಟ್ಟು ಹೋದ್ರೆ ಏನು ಮಾಡೋಕೆ ಆಗುತ್ತೆ ಎಂದಿದ್ದಾರೆ..
ಇದೇ ವೇಳೆ ಶ್ರೀರಾಮುಲು- ಜನಾರ್ಧನರೆಡ್ಡಿ ಸ್ನೇಹ ವಿಚಾರವಾಗಿ ಮಾತನಾಡ್ತಾ ಅದು ಅವರರವರ ವೈಯಕ್ತಿಕ ವಿಚಾರ ನಾನು ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ..








