ದೆಹಲಿ: ಜೋತಿರಾಧಿತ್ಯ ಸಿಂಧಿಯಾ ಅವರು ರಾಜಕೀಯ ಭವಿಷ್ಯಕ್ಕೆ ಹೆದರಿ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಿದ್ದಾರೆ. ಆದ್ರೆ ಅವರಿಗೆ ಅಲ್ಲಿ ಗೌರವ ಸಿಗಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಸಿಂಧಿಯಾ ಬಗ್ಗೆ ಮಾತನಾಡಿದ ಅವರು, ಇದು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು ಬಿಜೆಪಿ-ಆರ್‌ಎಸ್‌ಎಸ್. ಜ್ಯೋತಿರಾಧಿತ್ಯ ಸಿಂಧಿಯಾ ನನ್ನೊಂದಿಗೆ ಕಾಲೇಜಿನಲ್ಲಿದ್ದನು, ಅವನ ಸಿದ್ಧಾಂತ ನನಗೆ ತಿಳಿದಿದೆ. ಸಿಂಧಿಯಾ ರಾಜಕೀಯ ಭವಿಷ್ಯಕ್ಕೆ ಹೆದರಿಸಿ ಬಿಜೆಪಿ ಸೇರಿದ್ದಾರೆ. ‘ವಾಸ್ತವ ಅಂದ್ರೆ ಬಿಜೆಪಿಯಲ್ಲಿ ಸಿಂಧಿಯಾಗೆ ಗೌರವ ಸಿಗುವುದಿಲ್ಲ ಮತ್ತು ಆತ ತೃಪ್ತನಾಗುವುದಿಲ್ಲ. ಅದನ್ನು ಆತ ತಿಳಿದುಕೊಳ್ಳುತ್ತಾನೆ. ಅದು ನನಗೆ ಗೊತ್ತು ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದಿದ್ದಾರೆ.
ಜೋತಿರಾಧಿತ್ಯ ಸಿಂಧಿಯಾ ಮಂಗಳವಾರ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದರು. ಇವರ ಜೊತೆ 20 ಶಾಸಕರು ಸಹ ರಾಜೀನಾಮೆ ಪತ್ರವನ್ನು ಮಧ್ಯಪ್ರದೇಶದ ಸ್ಪೀಕರ್ ಗೆ ಕಳುಹಿಸಿಕೊಟ್ಟಿದ್ದಾರೆ. ಕಮಲನಾಥ್ ಜೊತೆಗಿನ ವೈಮನಸ್ಸು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಿದ್ದರು. ಅವರಿಗೆ ಕಮಲಪಡೆ ರಾಜ್ಯಸಭಾ ಟಿಕೆಟ್ ನೀಡಿದೆ.









