BJP | ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕಾಂಗ್ರೆಸ್ ನಾಯಕರು
ಬೆಂಗಳೂರು : ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪರವಿರುವುದು ಸ್ಪಷ್ಟವಾಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮೇಕೆದಾಟು ಕುಡಿಯುವ ನೀರಿನ ಯೋಜನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕ ವಿರುದ್ಧ ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್ ನಲ್ಲಿ ಸಮರ ಸಾರಿದೆ. ಸರಣಿ ಟ್ವೀಟ್ ಗಳನ್ನು ಮಾಡುತ್ತಾ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದೆ.
ಬಿಜೆಪಿ ಟ್ವೀಟ್ ನಲ್ಲಿ…
“ಕರ್ನಾಟಕದಲ್ಲಂತೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ನಮಗೆ ಮೈತ್ರಿಯ ಮೂಲಕ ಅಧಿಕಾರ ಲಭಿಸಿರುವುದು ತಮಿಳುನಾಡಿನಲ್ಲಿ. ಹೀಗಾಗಿ ನಮಗೆ ಕರ್ನಾಟಕಕ್ಕಿಂತ ತಮಿಳುನಾಡೇ ಮುಖ್ಯ” ರಾಹುಲ್ ಗಾಂಧಿ ಹೀಗೆಂದಿರಬಹುದೆಂಬ ಸಂಶಯ ದಟ್ಟವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪರವಿರುವುದು ಸ್ಪಷ್ಟವಾಗುತ್ತಿದೆ.
"ಕರ್ನಾಟಕದಲ್ಲಂತೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ನಮಗೆ ಮೈತ್ರಿಯ ಮೂಲಕ ಅಧಿಕಾರ ಲಭಿಸಿರುವುದು ತಮಿಳುನಾಡಿನಲ್ಲಿ. ಹೀಗಾಗಿ ನಮಗೆ ಕರ್ನಾಟಕಕ್ಕಿಂತ ತಮಿಳುನಾಡೇ ಮುಖ್ಯ"
ರಾಹುಲ್ ಗಾಂಧಿ ಹೀಗೆಂದಿರಬಹುದೆಂಬ ಸಂಶಯ ದಟ್ಟವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪರವಿರುವುದು ಸ್ಪಷ್ಟವಾಗುತ್ತಿದೆ. pic.twitter.com/MRKIM8awg3
— BJP Karnataka (@BJP4Karnataka) March 22, 2022
ಅಗತ್ಯ ಬಿದ್ದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರ ಸರ್ಕಾರವನ್ನು ಭೇಟಿಯಾಗುತ್ತೇವೆ ಎಂದು ಸ್ವತಃ ಸಿಎಂ ಭರವಸೆ ನೀಡಿದ್ದಾರೆ. ಇದರ ಒಂದು ಪಾಲಿನಷ್ಟಾದರೂ ಧೈರ್ಯ ತೋರಿ ಸೋನಿಯಾ, ರಾಹುಲ್ ಗಾಂಧಿ ಮೂಲಕ ತಮಿಳುನಾಡು ಸರ್ಕಾರದ ಕಿವಿ ಹಿಂಡಲು ನಿಮಗೆ ಅಡ್ಡಿಯಾಗಿರುವುದೇನು ಎಂದು ರಾಜ್ಯ ಕಾಂಗ್ರೆಸ್ ನಾಯಕರನ್ನ ಬಿಜೆಪಿ ಪ್ರಶ್ನಿಸಿದೆ. bjp-karnataka Congress mekedatu war tamilnadu