Politics : ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ… ಯುವ ಕಾಂಗ್ರೆಸ್ ಅಧ್ಯಕ್ಷರಾಗಲು ಇದೇ ಅರ್ಹತೆಯೇ..??? ನಲಪಾಡ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್…!!!
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಿನ್ನೆ ಮೊಹಮ್ಮದ್ ನಲಪಾಡ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ , ನಲಪಾಡ್ ವಿರುದ್ಧ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಗಳನ್ನ ಮಾಡಿದೆ.
2018ರಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡವರಿಗೆ ಸ್ಥಾನ ಸಿಕ್ಕಿದೆ.. 6 ವರ್ಷ ಕಾಲ ಪಕ್ಷದಿಂದ ಉಚ್ಛಾಟನೆಗೊಂಡಿದ್ರು. ಕೇವಲ 4 ವರ್ಷಗಳಲ್ಲಿ ಅವರೇ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ… ಎಂತಹ ವೈಚಿತ್ರ್ಯವಿದು ಎಂದು ಬಿಜೆಪಿ ವ್ಯಂಗ್ಯಾತ್ಮಕವಾಗಿ ಟ್ವೀಟ್ ಮಾಡಿದೆ.
ಕೊಲೆ ಯತ್ನ, ಕ್ರಿಮಿನಲ್ ಬೆದರಿಕೆ, ಅಕ್ರಮ ಗುಂಪುಗೂಡೋದು.. ಯುವ ಕಾಂಗ್ರೆಸ್ ಅಧ್ಯಕ್ಷರಾಗಲು ಇದೇ ಅರ್ಹತೆಯೇ ಎಂದು ಬಿಜೆಪಿ ಪ್ರಶ್ನೆ ಮಾಡಿದ್ದಾರೆ. ಒಮ್ಮೆ ತಲೆ ಕಡಿಯುತ್ತೇನೆ ಎನ್ನುತ್ತಾರೆ, ಮತ್ತೊಬ್ಬರ ಕಾಲು ಮುರಿಯುತ್ತಾರೆ. ಮಗದೊಮ್ಮೆ ಅಮಾಯಕರ ಮುಖ ಜಜ್ಜುತ್ತಾರೆ. ಅದೇ ವ್ಯಕ್ತಿ ಈಗ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಬಿಜೆಪಿ ಟ್ವೀಟ್ ನಲ್ಲಿ ಉಲ್ಲೇಖಿಸಿದೆ..
ಇನ್ನೂ ದೇಶಕ್ಕೆ ಕಾಂಗ್ರೆಸ್ ಯಾವ ಸಂದೇಶ ನೀಡುತ್ತಿದೆ ಎಂದು #AntiSocialKarnatakaCongress ಜೊತೆಗೆ ಬಿಜೆಪಿ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಟ್ವೀಟ್ ವಾರ್ ಮಾಡಿದೆ..
ಅಲ್ಲದೇ ಕೆಪಿಸಿಸಿ ಅಧ್ಯಕ್ಷರಿಗೆ ಕೊತ್ವಾಲ್ ಗ್ಯಾಂಗ್ ಶ್ರೀರಕ್ಷೆಯಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಬಿಟ್ ಕಾಯಿನ್ ಗ್ಯಾಂಗ್ ನಂಟುಂಟು. ಗುರುವಿಗೆ ತಕ್ಕ ಶಿಷ್ಯ ಎಂದು ಬಿಜೆಪಿ ಲೇವಡಿ ಮಾಡಿದೆ.