ಮಹಿಳಾ ದಿನಾಚರಣೆಯಂತೆ ‘ ವಿಶ್ವ ಪುರುಷರ ದಿನಾಚರಣೆ’ಗೆ ಬೇಡಿಕೆಯಿಟ್ಟ ಬಿಜೆಪಿ ನಾಯಕಿ..!
ಇಂದು ಮಹಿಳಾ ದಿನಚರಣೆಯನ್ನ ಎಲ್ಲೆಡೆ ಆಚರಣೆ ಮಾಡಲಾಗ್ತಿದ್ದು, ಸಾಧಕ ಮಹಿಳೆಯರ ಸಾಧನೆಗಳನ್ನು ನೆನೆಯಲಾಗುತ್ತಿದೆ. ಆದ್ರೆ ಇಂದು ರಾಜ್ಯಸಭೆಯಲ್ಲಿ ಬಿಜೆಪಿ ಸಂಸದೆ ಸೋನಲ್ ಮಾನ್ಸಿಂಗ್ ಹೊ¸ದೊಂದು ಬೇಡಿಕೆಯನ್ನಿಟ್ಟಿದ್ದಾರೆ. ಅದೇನೆಂದ್ರೆ ಮಹಿಲಾ ದಿನಚರಣೆಯಂತೆಯೇ ‘ವಿಶ್ವ ಪುರುಷರ’ ದಿನವನ್ನೂ ಸಹ ಆಚರಸಿಬೇಕೆಂದು ಆಗ್ರಹಿಸಿದ್ದಾರೆ. ಬಜೆಟ್ ಅಧಿವೇಶನದ ಎರಡನೇ ಸೆಷನ್ ಇಂದಿನಿಂದ ಆರಂಭವಾಗಿದೆ. ಕರ್ನಾಟಕದ ರಾಜಕೀಯ ಧುರೀಣ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಅಧಿವೇಶನದಲ್ಲಿ ಮಹಿಳಾ ದಿನದ ಅಂಗವಾಗಿ ಹಲವು ಸದಸ್ಯರು ಮಾತನಾಡಿದ್ದಾರೆ.
ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ : ಸಿಎಂ
ಇದೇ ವೇಳೆ ಮಾತನಾಡಿದ ಸೋನಲ್ ವಿಶ್ವ ಮಹಿಳಾ ದಿನಾಚರಣೆಯಂತೆ ವಿಶ್ವ ಪುರುಷ ದಿನಾಚರಣೆಯನ್ನು ಕೂಡ ಆಚರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಎಂದು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿಯವರು ಅಂಕಿ ಅಂಶಗಳು ತೋರಿಸುವಂತೆ ಶೇ. 6ಕ್ಕಿಂತ ಹೆಚ್ಚು ಮಹಿಳೆಯರಿಗೆ ನಾಯಕತ್ವ ಲಭಿಸಿಲ್ಲ. ನಾವು ಈ ಬಗ್ಗೆ ಯೋಚಿಸಬೇಕು. ರಾಜ್ಯಸಭೆ ಮತ್ತು ಲೋಕಸಭೆಯ ಶೇ. 33 ಮಹಿಳಾ ಮೀಸಲಾತಿಯನ್ನು ಬಳಸಿಕೊಳ್ಳುವ ಮೂಲಕ ಈ ಬದಲಾವಣೆಗೆ ನಾಂದಿ ಹಾಡಬೇಕು ಎಂದು ಎನ್ಸಿಪಿ ಸದಸ್ಯೆ ಡಾ. ಫೌಜಿಯಾ ಖಾನ್ ಹೇಳಿದ್ದಾರೆ.







