ಬೆಂಗಳೂರು: ಕಟ್ಟಡ ಕಾರ್ಮಿಕರ (Construction Workers) ಆರೋಗ್ಯ ತಪಾಸಣೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ನಿಯೋಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದೆ. ಈ ಮೂಲಕ ಸಚಿವ ಸಂತೋಷ್ ಲಾಡ್ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳ ಹೆಲ್ತ್ ಚೆಕಪ್‌ನಲ್ಲಿ (Health Check Up) ಭಾರೀ ಗೋಲ್ಮಾಲ್ ನಡೆದಿದೆ. 47.99 ಕೋಟಿ ರೂ.ಗಳನ್ನ ಗುಳುಂ ಮಾಡಲಾಗಿದೆ. ಯಾವುದೇ ಹೆಲ್ತ್ ಚೆಕಪ್ ನಡೆಸದೇ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹೆಲ್ತ್ ಚೆಕಪ್ ಹೆಸರಲ್ಲಿ ಒಂದೊಂದಕ್ಕೆ ಒಂದೊಂದು ರೀತಿಯಲ್ಲಿ ಬಿಲ್ ಮಾಡಿದ್ದಾರೆ. ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್ ನೀಡಿ ಹಣ ಹೊಡೆದಿದ್ದಾರೆ. ಇದಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇರ ಹೊಣೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.








