`ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ’ : ಮಧು ಬಂಗಾರಪ್ಪ Madhu Bangarappa
ಕೊಪ್ಪಳ : ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇವಲ ವ್ಯವಹಾರ ನಡೆಸಲೆಂದು ಅಧಿಕಾರಕ್ಕೆ ಬರುತ್ತೆ.
ಬಂದು ದೇಶ ಲೂಟಿ ಮಾಡಿ ಹಾಳು ಮಾಡಿ ಹೋಗುತ್ತೆ. ಬಿಜೆಪಿಯವರು ವ್ಯವಹಾರಕ್ಕಾಗಿ ಬರುತ್ತಾರೆ.
ವ್ಯವಹಾರ ಮಾಡಿ ಕುದುರದೇ ಹೋದರೆ ಸರ್ಕಾರ ಬಿದ್ದು ಹೋಗುತ್ತೆ ಎಂದು ಸದ್ಯದ ಬೆಳವಣಿಗೆ ಬಗ್ಗೆ ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ಅಂದ್ರೆ ಬ್ಯುಸಿನೆಸ್ ಜನತಾ ಪಾರ್ಟಿ. ಆ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ.
ಇದು ರಾಜ್ಯದ ದುರಂತ ಎಂದು ಮಧುಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.










