MP Renukacharya | ಕಾಂಗ್ರೆಸ್ ನವರಿಗೆ ತಾಕತ್ ಇದ್ದರೇ ಟಿಪ್ಪು ಫೋಟೋ ಮನೆಗಳಲ್ಲಿ ಹಾಕಿಕೊಳ್ಳಲಿ
ದಾವಣಗೆರೆ : ನಾವು ನಮ್ಮ ಮನೆಗಳಲ್ಲಿ ಸಾವರ್ಕರ್ ಫೋಟೋ ಹಾಗೂ ಮನೆಗಳ ಮುಂದೆ ವೀರ ಸಾವರ್ಕರ್ ಬ್ಯಾನರ್ ಹಾಕಿಕೊಳ್ಳೋತ್ತೇವೆ.
ಕಾಂಗ್ರೆಸ್ ನಾಯಕರಿಗೆ ತಾಕತ್ ಇದ್ರೆ ಅವರ ಮನೆಗಳಲ್ಲಿ ಟಿಪ್ಪು ಫೋಟೋ ಹಾಗೂ ಮನೆಗಳ ಮುಂದೆ ಟಿಪ್ಪು ಸುಲ್ತಾನ್ ಬ್ಯಾನರ್ ಹಾಕಿಕೊಳ್ಳಲಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಮುಸ್ಲಿಂ ಧರ್ಮದ ಪ್ರಕಾರ ಸತ್ತವರ ಫೋಟೋಗಳನ್ನು ಅವರ ಮನೆಗಳಲ್ಲಿ ಆಗಲಿ ಅಥವಾ ಮಸೀದಿಗಳಲ್ಲಿ ಹಾಕಿಕೊಳ್ಳುವುದಿಲ್ಲ.
ಕಾಂಗ್ರೆಸ್ ನಾಯಕರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದರು, ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ವರ್ತನೆಯಿಂದ ಅವರ ಪಕ್ಷದ ಹಿಂದೂ ಕಾರ್ಯಕರ್ತರೇ ಸಿಡಿದ್ದಿದ್ದಾರೆ. ಕೋಮು ಸಂಘರ್ಷಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ.
ಮೊಟ್ಟೆ ಎಸೆದಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ನಾನು ಮೊನ್ನೆಯೇ ಹೇಳಿದ್ದೆ ಅದೇ ರೀತಿ ಮೊಟ್ಟೆ ಎಸೆದ ಕಾಂಗ್ರೆಸ್ ಕಾರ್ಯಕರ್ತ ಸಂಪತ್ ಸ್ವತಹ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.