ಬಿಜೆಪಿ ಶಾಸಕ ತಳ್ಳಾಟ, ಪುರಸಭೆ ಸದಸ್ಯೆಗೆ ಗರ್ಭಪಾತ
ಬಾಗಲಕೋಟೆ : ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದುಸವದಿ ಮತ್ತು ಅವ್ರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಮೆಟ್ಟಿಲು ಮೇಲಿಂದ ತಳ್ಳಿದ್ದರು.
ಇದೀಗ ಹಾಗೆ ತಳ್ಳಲ್ಪಟ್ಟಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಗರ್ಭಪಾತವಾಗಿದೆ ಎಂದು ತಿಳಿದು ಬಂದಿದೆ. `ಹಳ್ಳಿ ಫೈಟ್’ಗೆ ಮುಹೂರ್ತ ಫಿಕ್ಸ್: ಡಿ.22, 27ಕ್ಕೆ ಎರಡು ಹಂತದಲ್ಲಿ ಚುನಾವಣೆ
ಶಾಸಕರ ಅನುಚಿತ ವರ್ತನೆ, ನೂಕಾಟ, ತಳ್ಳಾಟಕ್ಕೆ ಒಳಗಾಗಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತ ಆಗಿದೆ. ಅವರು 3 ತಿಂಗಳ ಗರ್ಭಿಣಿಯಾಗಿದ್ದರು ಅಂತ ಅವರ ಪತಿ ಅಳಲು ತೋಡಿಕೊಂಡಿದ್ದಾರೆ.
ಅಂದಹಾಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ದಿನ ಬಿಜೆಪಿ ಶಾಸಕ ಸಿದ್ದು ಸವದಿ ಮತ್ತು ಅವರ ಬೆಂಬಲಿಗರು ಚಾಂದಿನಿ ನಾಯಕ್ ಸೇರಿದಂತೆ ಒಟ್ಟು ಮೂರು ಮಹಿಳಾ ಸದಸ್ಯರನ್ನ ಎಳೆದಾಡಿದ್ದರು.
ಈ ಸಂದರ್ಭದಲ್ಲಿ ಚಾಂದಿನಿ ನಾಯಕ್ ಅವರು ಮೆಟ್ಟಿನಿಂದ ಕೆಳಗುರುಳಿದ್ದರು. ಇದರ ವಿಡಿಯೋ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಸಿದ್ದ ಸವದಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಘಟನೆ ನಡೆದು ಹಲವು ದಿನಗಳ ಬಳಿಕ ಚಾಂದಿನಿ ನಾಯಕ್ ಗರ್ಭಪಾತಕ್ಕೆ ಒಳಗಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel