ಕೊರೊನಾ ವಿರುದ್ಧ ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ : ಬಿಜೆಪಿ ಶಾಸಕ ಕರೆ BJP MLA
ಲಕ್ನೋ : ಕೊರೊನಾ ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಹೆಮ್ಮಾರಿಯಿಂದ ಸಾಕಷ್ಟು ಮಂದಿ ಈಗಾಗಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈ ಮಧ್ಯೆ ಕೊರೊನಾ ವಿರುದ್ಧ ಗೆಲ್ಲಬೇಕಾದರೇ ಗೋಮೂತ್ರ ಸೇವಿಸಿ ಎಂದು ಯುಪಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಗೋಮೂತ್ರ ಬಳಸಿ ಕೊರೊನಾ ಹರಡುವುದನ್ನು ತಡೆಗಟ್ಟಬಹುದಾಗಿದೆ.
ಅಲ್ಲದೆ ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದರ ಮಧ್ಯೆಯೂ ನನ್ನ ಉತ್ತಮ ಆರೋಗ್ಯದ ಗುಟ್ಟು ಗೋಮೂತ್ರ ಎಂದು ಹೇಳಿಕೊಂಡಿದ್ದಾರೆ.
ಇದಲ್ಲದೇ ಗೋಮೂತ್ರ ಹೇಗೆ ತೆಗೆದುಕೊಳ್ಳಬೇಕು ಎಂದು ಮಾಹಿತಿ ಕೊಟ್ಟಿರುವ ಅವರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು.
ಒಂದು ಗ್ಲಾಸ್ ನೀರಿನಲ್ಲಿ ಎರಡ್ಮೂರು ಕ್ಯಾಪ್ ನಷ್ಟು ಗೋಮೂತ್ರ ಬೆರೆಸಿ ಸೇವಿಸಬೇಕು ಎಂದಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.










