ಸಮ್ಮಿಶ್ರ ಸರ್ಕಾರದ ನಿದ್ದೆಗೆಡಿಸಿ ಸರ್ಕಾರದ ಪತನಕ್ಕೂ ಕಾರಣವಾದ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಸದ್ಯ ಬಿಜೆಪಿ ಸೇರಿ ಪ್ರಬಲ ಖಾತೆಗೆ ಸಚಿವರಾಗಿದ್ದಾರೆ. ನೂತನ ಸಚಿವರಾದ ನಂತರ ಮಾತನಾಡಿರೋ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರೋಧ ಮಾಡಿದ್ದಕ್ಕೆ ನಾನು ಈಗ ಲೀಡರ್ ಆಗಿದ್ದೇನೆ ಎನ್ನುವ ಮೂಲಕ ಡಿಕೆಶಿಗೆ ಧನ್ಯವಾದ ತಿಳಿಸಿದ್ದಾರೆ. ಚುನಾವಣೆಯಲ್ಲಿ ನನ್ನ ವಿರುದ್ಧ ನನ್ನವರೇ ಷಡ್ಯಂತ್ರ ಮಾಡಿದ್ರು. ಆದ್ರೆ ನಾನು ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ನಂಬಿ ಬಿಜೆಪಿಗೆ ಬಂದಿದ್ದೇನೆ ಎಂದರು. ರಾಜಕೀಯದಲ್ಲಿ ಸಾರ್ವಜನಿಕರ ತೀರ್ಮಾನವೇ ಮುಖ್ಯವಾಗಿರುತ್ತದೆ. ೧೪ ತಿಂಗಳಿoದ ನಾನು ತುಂಬಾ ನೊಂದಿದ್ದೇನೆ. ನಮಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಅಲ್ಲಿಂದ ಹೊರ ಬಂದಮೇಲೆ ನಮಗೆ ಗೆಲುವು ಸಿಕ್ಕಿದೆ ಎಂದು ಬೀಗುವುದಿಲ್ಲ. ಮುಂದೆ ರಾಜಕೀಯ ಸಾಕು ಎನಿಸಿದರೆ ಬಿಜೆಪಿಯಲ್ಲೇ ನಿವೃತ್ತಿಯಾಗುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿಯೇ ಸರ್ವಸ್ವ ಎಂದು ಒಪ್ಪಿಕೊಂಡಿದ್ದಾರೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








