ಬಿಜೆಪಿ ಆಪರೇಷನ್ ಶುರು : ಕಮಲ್ ಹಾಸನ್ ಗೆ ಶಾಕ್
ಚೆನ್ನೈ : ಮುಂದಿನ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಮಕ್ಕಳ್ ನೀಧಿ ಮೈಯ್ಯಮ್ ನ ಅಧ್ಯಕ್ಷ ಕಮಲ್ ಹಾಸನ್ ಗೆ ಬಿಜೆಪಿ ಬಿಗ್ ಶಾಕ್ ನೀಡಿದೆ.
ಮಕ್ಕಳ್ ನೀಧಿ ಮೈಯ್ಯಮ್ ಪಕ್ಷದ ಹಿರಿಯ ಮುಖಂಡ ಇಂದು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಕಮಲ್ ಹಾಸನ್ ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಎಂಎನ್ ಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಎ ಅರುಣಾಚಲಂ ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎ ಅರುಣಾಚಲಂ ಅವರು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಕೇಸರಿ ಬಾವುಟ ಹಿಡಿದಿದ್ದಾರೆ.
ಇನ್ನು ಎ ಅರುಣಾಚಲಂ ಅವರು ಗ್ರಾಮೀಣ ಭಾಗದ ನಾಯಕರಾಗಿದ್ದು, ಇವರು ಎಂಎನ್ ಎಂಗೆ ಗ್ರಾಮೀಣ ಪ್ರದೇಶಗಳಲ್ಲಿ ಗಟ್ಟಿ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







