BJP ಹಿಂದುತ್ವ ಮುಖವಾಡ ಬಹಿರಂಗ : ಮುತಾಲಿಕ್
ಲಿಂಗಸಗೂರು : ಕಲಬುಗರಿ ಜಿಲ್ಲೆ ಪ್ರವೇಶಿಸದಂತೆ ನಿಷೇಧ ಹೇರಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಿಂಗಸಗೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಆಂದೋಲ ಶ್ರೀಗಳು, ಚೈತ್ರಾ ಕುಂದಾಪುರ ಮತ್ತು ನನ್ನನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧದ ಹಿಂದೆ ಬಿಜೆಪಿಯ ನಕಲಿ ಹಿಂದುತ್ವ ಮುಖವಾಡ ಬಹಿರಂಗಗೊಂಡಿದೆ.
ಆಳಂದ ಪಟ್ಟಣ ಮಸೀದಿ ಆವರಣದಲ್ಲಿನ ರಾಘವಚೈತನ್ಯರ ಸಮಾಧಿ ಮತ್ತು ಈಶ್ವರ ಲಿಂಗವಿದೆ. ಕೆಲ ಕಿಡಗೇಡಿಗಳು ಅದನ್ನ ಅಪವಿತ್ರಗೊಳಿಸಿದ್ದರು.
ಹೀಗಾಗಿ ನಮ್ಮ ಮೂವರ ನೇತೃತ್ವದಲ್ಲಿ ಮಹಾಶಿವರಾತ್ರಿ ನಿಮಿತ್ತ ಮಾಲಾಧಾರಿಗಳ ಸಮೇತ ಮಾರ್ಚ್ 1ರಂದು ಈಶ್ವರಲಿಂಗ ಶುದ್ಧೀಕರಿಸಿ ಪೂಜೆ ನೆರವೇರಿಸಲು ಆಳಂದ ಚಲೋ ಕಾರ್ಯಕ್ರಮ ಆಯೋಜಿಸಿತ್ತು.
ಆದ್ರೆ ನಮ್ಮನ್ನು ಜಿಲ್ಲೆ ಪ್ರವೇಶಿಸಿದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಹಿಂದುಗಳ ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಹಿಂದುತ್ವ ರಕ್ಷಣೆ ಮಾಡುವವರ ಬರ್ಬರ ಕೊಲೆಗಳನ್ನು ಹತ್ಯೆ ಪ್ರಕರಣಕ್ಕೆ ಸೀಮಿತ ಮಾಡಬಾರದು ಎಂದು ಮನವಿ ಮಾಡಿಕೊಂಡ ಮುತಾಲಿಕ್, ಎನ್ ಕೌಂಟರ್ ಮಾಡಿ ತಕ್ಕ ಉತ್ತರ ನೀಡಬೇಕು ಎಂದರು. bjp-shri ram sena pramod muthalik press meet saaksha tv









