BJP | ಎಂ.ಬಿ.ಪಾಟೀಲರೇ ರಾಜಕೀಯ ಪ್ರೇರಿತ ಹೇಳಿಕೆ ಬದಿಗಿರಿಸಿ
ಬೆಂಗಳೂರು : ಎಂ.ಬಿ.ಪಾಟೀಲರೇ ನೀವು ಪ್ರಚಾರ ಸಮಿತಿ ಅಧ್ಯಕ್ಷರಾದ ಕಾರಣಕ್ಕೆ ಪ್ರಚಾರದಲ್ಲಿರಲೇಬೇಕು ಎನ್ನುವ ಕಾರಣಕ್ಕೆ ಭಾಷಣದ ಸರಕು ಹುಡುಕಬೇಡಿ ಎಂದು ಎಂ.ಬಿ.ಪಾಟೀಲ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ. BJP strong reply to congress leader M B Patil
ಹಿಜಾಬ್ ಪ್ರಕರಣ ಬಹಳ ಖೇದಕರವಾದ ವಿಚಾರ. ಶಾಲಾ ಕಾಲೇಜುಗಳಲ್ಲಿ ಧಾರ್ಮಿಕಯನ್ನು ಬಿಂಬಿಸಿ ಮಕ್ಕಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಸರ್ಕಾರ ತಪ್ಪನ್ನು ಮಾಡಿದೆ.ಶಾಲಾ ಕಾಲೇಜುಗಳಲ್ಲಿ ರಾಜಕೀಯ ಬೆರಸಬಾರದು. ಸಮವಸ್ತ್ರ ಆದೇಶ ಹೊರಡಿಸಿದೆ. ಹಿಂದಿನ ಸ್ಥಿತಿಯನ್ನು ಮುಂದುವರೆಸಬೇಕಿದೆ. ಶಾಲಾ ಕಾಲೇಜುಗಳಲ್ಲಿ ರಾಜಕೀಯ ಹಸ್ತಕ್ಷೇಪ, ವಿಷ ಬೀಜ ಬಿತ್ತಬಾರದು. ಇದೆಲ್ಲಾ ಆರಂಭವಾಗಿದ್ದೆ ಬಿಜೆಪಿಯಿಂದ ಎಂದು ಎಂ.ಬಿ.ಪಾಟೀಲರು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಬಿಜೆಪಿ, ಎಂ.ಬಿ.ಪಾಟೀಲರೇ ನೀವು ಪ್ರಚಾರ ಸಮಿತಿ ಅಧ್ಯಕ್ಷರಾದ ಕಾರಣಕ್ಕೆ ಪ್ರಚಾರದಲ್ಲಿರಲೇಬೇಕು ಎನ್ನುವ ಕಾರಣಕ್ಕೆ ಭಾಷಣದ ಸರಕು ಹುಡುಕಬೇಡಿ. ಸಮವಸ್ತ್ರ ಸಂಹಿತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಮುನ್ನ ನಿಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಧರಿಸಲು ಅವಕಾಶ ನೀಡುತ್ತೀರಾ ಎಂಬುದನ್ನು ಮೊದಲು ತಿಳಿಸಿ.
ಗೋವಾದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ. ಎಂ.ಬಿ. ಪಾಟೀಲರೇ, ನಿಮ್ಮ ರಾಜಕೀಯ ಪ್ರೇರಿತ ಹೇಳಿಕೆಯನ್ನು ಬದಿಗಿರಿಸಿ. ಗೋವಾದ ಕಾಂಗ್ರೆಸ್ ಮುಖಂಡರಿಂದ ಈ ಹೇಳಿಕೆ ಕೊಡಿಸಲು ನಿಮಗೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.