BJP | ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ
ಬೆಂಗಳೂರು : ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ. ಇವೇ ಬಿಜೆಪಿ ಅಸಲಿ ಗುಣ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮವೆಸಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್ , ದೇಶಭಕ್ತಿ ಹೆಸರಲ್ಲಿ ವ್ಯಾಪಾರ, ಧರ್ಮದ ಹೆಸರಲ್ಲಿ ಅಕ್ರಮ.
ಇವೇ ಬಿಜೆಪಿ ಅಸಲಿ ಗುಣ. ಅಯೋಧ್ಯೆಯಲ್ಲಿ ಶಾಸಕ ಸೇರಿದಂತೆ ಬಿಜೆಪಿಯ 40 ಮಂದಿ ಅಕ್ರಮ ಭೂವ್ಯವಹಾರ ನಡೆಸಿದ್ದು ಹಿಂದೂ ಧರ್ಮಕ್ಕೆ ಎಸಗಿದ ಮಹಾದ್ರೋಹ.
ಮರ್ಯಾದೆ ಬಿಟ್ಟಿರುವ ಬಿಜೆಪಿ ಮರ್ಯಾದಾ ಪುರುಷೋತ್ತಮನ ಮರ್ಯಾದೆ ಕಳೆಯುತ್ತಿರುವುದಕ್ಕೆ ರಾಮ ಎಂದಿಗೂ ಕ್ಷಮಿಸುವುದಿಲ್ಲ.

ಕಾಂಗ್ರೆಸ್‌ನ ಬೆಲೆ ಏರಿಕೆಯ ವಿರುದ್ಧದ ಪ್ರತಿಭಟನೆಯಿಂದ ರಾಮನಿಗೆ ಅವಮಾನ ಆಗಿದೆ ಎಂದು ಸಂಬಂಧವೇ ಇಲ್ಲದ ವಿಷಯಕ್ಕೆ ಸಂಬಂಧ ಕಲ್ಪಿಸಿದ ಅಮಿತ್ ಶಾ ಅವರಿಗೆ ಅವರ ಪಕ್ಷವೇ ಮಾಡಿದ ಈ ನೈಜ ಅವಮಾನ ತಿಳಿಯಲಿಲ್ಲವೇ? ರಾಮಜನ್ಮ ಭೂಮಿಯನ್ನು ‘ಬಿಜೆಪಿಯ ಭ್ರಷ್ಟಜನ್ಮಭೂಮಿ’ಯಾಗಿನ್ನಾಗಿಸಿದ್ದು ಸಮಸ್ತ ರಾಮಭಕ್ತರಿಗೆ ಹಾಗೂ ರಾಮನಿಗೆ ಮಾಡಿದ ಅವಮಾನ.
ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮವೆಸಗಿದ್ದು ಬೆಳಕಿಗೆ ಬಂದಿತ್ತು, ಈಗ ಬಿಜೆಪಿಯವರ ಅಕ್ರಮ ಭೂ ವ್ಯವಹಾರವನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವೇ ಬಯಲು ಮಾಡಿದೆ.
ಬಿಜೆಪಿಗೆ ದೇಶಭಕ್ತಿ, ಧರ್ಮಭಕ್ತಿಗಳು ವ್ಯಾಪಾರಕ್ಕೆ & ಭ್ರಷ್ಟಾಚಾರಕ್ಕೆ ಇರುವ ಟೂಲ್‌ಕಿಟ್‌ಗಳು. ರಾಮನ ಹೆಸರಿನ ಮರೆಯಲ್ಲಿ ಬಿಜೆಪಿ ಅಕ್ರಮ ನಡೆಸುವುದೇ ಬಿಜೆಪಿಯ ಅಸಲಿ ಮುಖ ಎಂದು ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿ : Nitish Kumar – ಬಿಹಾರ್ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ…







