ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ: ಬಿಜೆಪಿ ಟ್ವೀಟ್ ಬಾಣ
ಬೆಂಗಳೂರು : ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕುಟುಕಿದೆ.
ನಿನ್ನೆ ರಾತ್ರಿ ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಬಂಧನವಾಗಿದೆ.
ಈ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ಮಾತನಾಡುತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ಇರಿ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ನಿಲ್ಲಿ : ಅಖಂಡ
ಅಖಂಡ ಶ್ರೀನಿವಾಸ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ಟ್ವಿಟ್ಟರ್ ನಲ್ಲಿ ” ಡಿಕೆಶಿಯವರೇ ಈಗಲಾದರೂ ನನ್ನ ಪರವಾಗಿ ನಿಲ್ಲಿ – ಅಖಂಡ ಶ್ರೀನಿವಾಸ ಮೂರ್ತಿ.
ಸಂಪತ್ ರಾಜ್ ಬಂಧನದ ಬಳಿಕ ಹೇಳಿದ ಮಾತಿದು. ಏನಾಗುತ್ತಿದೆ ಕಾಂಗ್ರೆಸ್. ಒಬ್ಬ ದಲಿತ ಶಾಸಕನಿಗೆ ನಿಮ್ಮ ಪಕ್ಷದಲ್ಲಿ ಬೆಲೆ ಇಲ್ಲವೇ ಎಂದು ಕುಟುಕಿದೆ.
ಅಲ್ಲದೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕಾಲದಿಂದಲೇ ಕಾಂಗ್ರೆಸ್ ದಲಿತರ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ.
ಬೆಂಗಳೂರಿನ ದಕ್ಷಿಣದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ; ರ್ಯಾಪಿಡ್ ಟೆಸ್ಟ್ ಮೊರೆ ಮೋದ ಬಿಬಿಎಂಪಿ..!
ರಾಜ್ಯದಲ್ಲೂ ಅದರ ಮುಂದುವರೆದ ಭಾಗಗಳನ್ನು ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ.
ಹಿರಿಯ ದಲಿತ ನಾಯಕರಾದ ಖರ್ಗೆ & ಪರಮೇಶ್ವರ್ ಅವರ ಸೋಲುಗಳ ಹಿಂದೆ ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯಿದೆ ಎಂದು ಬಿಜೆಪಿ ಟೀಕಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









