ರಕ್ತಗತವಾಗಿ ಬರೋದು ಕಾಯಿಲೆ ಮಾತ್ರ, ಹೋರಾಟವಲ್ಲ : ಬಿಜೆಪಿ
ಬೆಂಗಳೂರು : ರಕ್ತಗತವಾಗಿ ಬರುವುದು ಖಾಯಿಲೆ ಮಾತ್ರ. ಹೋರಾಟ ರಕ್ತಗತವೋ ಮತ್ತೊಂದೋ, ಆದರೆ ಕೋವಿಡ್ ಮಾತ್ರ #ಸುಳ್ಳಿನಜಾತ್ರೆ ಮೂಲಕ ಹಬ್ಬುವುದು ನಿಶ್ಚಿತ ಎಂದು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ಪ್ರಶ್ನೆಗಳ ಸುರಿಮಳೆಗೈದಿದೆ.
ಹೋರಾಟದ ಕಿಚ್ಚು ಕಾಂಗ್ರೆಸ್ ಪಕ್ಷಕ್ಕೆ ರಕ್ತಗತವಾಗಿ ಬಂದಿದೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅಬ್ಬರಿಸಿದ್ದಾರೆ. ಆದರೆ ಒಂದು ವೈಜ್ಞಾನಿಕ ಸತ್ಯವನ್ನು ಕಾಂಗ್ರೆಸ್ಸಿಗರು ನೆನಪಿಟ್ಟುಕೊಳ್ಳಬೇಕು. ರಕ್ತಗತವಾಗಿ ಬರುವುದು ಖಾಯಿಲೆ ಮಾತ್ರ. ಹೋರಾಟ ರಕ್ತಗತವೋ ಮತ್ತೊಂದೋ, ಆದರೆ ಕೋವಿಡ್ ಮಾತ್ರ #ಸುಳ್ಳಿನಜಾತ್ರೆ ಮೂಲಕ ಹಬ್ಬುವುದು ನಿಶ್ಚಿತ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದೆ, ಅಲ್ಲಿನ ಮುಖ್ಯಮಂತ್ರಿಯ ಜೊತೆ ಮಾತನಾಡಿ ವ್ಯಾಜ್ಯ ಬಗೆಹರಿಸುವುದು ಬಿಟ್ಟು ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವುದು ಕಾಂಗ್ರೆಸ್ ಪಕ್ಷದ ಶುದ್ಧ ರಾಜಕೀಯ ನಿಲುವಾಗಿದೆ. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ತಮಿಳುನಾಡು ಸರ್ಕಾರ. ಅಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರದ ಭಾಗವಾಗಿದೆ. ಆದರೂ ಇಲ್ಲಿ ರಾಜಕೀಯಕ್ಕಾಗಿ ಪಾದಯಾತ್ರೆ ನಡೆಸುತ್ತಿದೆ.
ಮಾನ್ಯ ಡಿಕೆಶಿ ಅವರೇ,
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ.
ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು.
ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ.
ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ? pic.twitter.com/vk0lf66SxB
— BJP Karnataka (@BJP4Karnataka) January 10, 2022
ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಅದೇ ಸರ್ಕಾರ ನಮ್ಮ ರಾಜ್ಯದ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಕಾಂಗ್ರೆಸ್ಸಿಗರು ಅಲ್ಲೊಂದು ನಾಟಕ, ಇಲ್ಲೊಂದು ನಾಟಕ ಮಾಡುತ್ತಿದ್ದಾರೆ.
ಮಾನ್ಯ ಡಿಕೆಶಿ ಅವರೇ,ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ. ಕೋವಿಡ್ ಸೋಂಕಿನ ಪ್ರಾಥಮಿಕ ಲಕ್ಷಣವಾದ ಕೆಮ್ಮು ನಿಮ್ಮನ್ನು ನಿನ್ನೆ ಬಾಧಿಸಿತ್ತು.ಇಂದು ನೀವು ಯಾವುದೇ ಮುಂಜಾಗ್ರತೆ ಇಲ್ಲದೆ ಮುಗ್ಧ ಮಕ್ಕಳೊಂದಿಗೆ ಬೆರೆತಿದ್ದೀರಿ. ಇದು ಕೋವಿಡ್ ಸೋಂಕಿಗೆ ಕಾರಣವಾದರೆ ನೀವು ಹೊಣೆ ಹೊರುತ್ತೀರಾ ಎಂದು ಪ್ರಶ್ನಿಸಿದೆ.








