BJP | ಗಲಭೆಗಳೆಲ್ಲವೂ ಕಾಂಗ್ರೆಸ್ ಪ್ರೇರಿತ ಜಿಹಾದ್
ಬೆಂಗಳೂರು : ಗಲಭೆಗಳೆಲ್ಲವೂ ಕಾಂಗ್ರೆಸ್ ಪ್ರೇರಿತ ಜಿಹಾದ್ ಎಂದು ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಹುಬ್ಬಳ್ಳಿ ಗಲಭೆಯಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಕುಟುಂಬಗಳಿಗೆ ಶಾಸಕ ಶಮೀರ್ ಅಹ್ಮದ್ ಸಹಾಯಹಸ್ತ ವಿಚಾರವಾಗಿ ಬಿಜೆಪಿ ಘಟಕ ಸರಣಿ ಟ್ವೀಟ್ಗಳ ಮೂಲಕ ಟೀಕೆ ಮಾಡಿದೆ.
ಬಿಜೆಪಿ ತಮ್ಮ ಟ್ವೀಟ್ ನಲ್ಲಿ… ಹುಬ್ಬಳ್ಳಿ ಗಲಭೆಗೆ #ಮೀರ್‌ಸಾದಿಕ್ ಅವರಿಂದ ನೀಲನಕ್ಷೆ ತಯಾರಾಗಿತ್ತೇ? ಹುಬ್ಬಳ್ಳಿಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನೇರವಾಗಿ ಗಲಭೆಯಲ್ಲಿ ಭಾಗಿಯಾಗಿರುವುದು ದೃಢ ಪಟ್ಟಿದೆ. ಈಗ, ಗಲಭೆಯ ಆರೋಪಿಗಳಿಗೆ ಸಿದ್ದರಾಮಯ್ಯ ಆಪ್ತ ಜಮೀರ್ ಇನಾಮು ನೀಡುತ್ತಿದ್ದಾರೆ. ಗಲಭೆ ನಡೆಸಿದ್ದಕ್ಕಾಗಿ ಈ ಉಡುಗೊರೆಯೇ ಎಂದು ಕುಟುಕಿದೆ.
https://twitter.com/BJP4Karnataka/status/1519915953303470080?s=20&t=xmZYW2uhbAY3kq_AVLb3bw
ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪರವಾಗಿ ಮಾತನಾಡಿದ ಸಿದ್ದರಾಮಯ್ಯ, ಚಂದ್ರು ಕೊಲೆಯ ಆರೋಪಿಗಳ ಬಗ್ಗೆ ಮೃದು ಧೋರಣೆ ತೋರಿದರು.. ಈಗ ಹುಬ್ಬಳ್ಳಿ ಗಲಭೆಕೋರರಿಗೆ #ಮೀರ್‌ಸಾದಿಕ್ ಆಪ್ತ ಭಕ್ಷೀಸು ನೀಡುತ್ತಿದ್ದಾರೆ. ಗಲಭೆಗಳೆಲ್ಲವೂ ಕಾಂಗ್ರೆಸ್ ಪ್ರೇರಿತ ಜಿಹಾದ್ ಅಲ್ಲದೆ ಮತ್ತೇನು ಎಂದು ಬಿಜೆಪಿ ಪ್ರಶ್ನಿಸಿದೆ.
ಹುಬ್ಬಳ್ಳಿ ಗಲಭೆಯ ಆರೋಪಿಗಳಿಗೆ #ಮೀರ್‌ಸಾದಿಕ್ ಪಟ್ಟ ಶಿಷ್ಯ ಜಮೀರ್ ಅಹ್ಮದ್ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಗಲಭೆಗೂ ಮುನ್ನ ಯಾವೆಲ್ಲಾ ರೀತಿಯ ನೆರವು ನೀಡಿದ್ದೀರಿ? #ಸೆಕ್ಷನ್‌ರಾಮಯ್ಯ ಅವರೇ, ನಿಮ್ಮ ಶಿಷ್ಯ ಆರೋಪಿಗಳ ಪರವಾಗಿರುವುದು ಅಪರಾಧವಲ್ಲವೇ?

ಮಂಗಳೂರು ಸಿಎಎ ಗಲಭೆ, ಡಿಜೆ ಹಳ್ಳಿ ಗಲಭೆ, ಪಾದರಾಯನಪುರ ಗಲಭೆ, ಹಿಜಾಬ್ ಗಲಭೆ, ಹುಬ್ಬಳ್ಳಿ ಗಲಭೆ ಇದೆಲ್ಲವೂ ಕಾಂಗ್ರೆಸ್ ಪ್ರಾಯೋಜಿತ ಜಿಹಾದ್. ಪ್ರತಿ ಗಲಭೆಯ ಆರೋಪಿಗಳಿಗೆ ಕೆಪಿಸಿಸಿ ಹಾಗೂ #ಮೀರ್‌ಸಾದಿಕ್ ಅವರಿಂದ ಆರ್ಥಿಕ, ಕಾನೂನಾತ್ಮಕ ನೆರವು ಲಭಿಸುತ್ತಿರುವುದೇಕೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.
bjp tweet on siddaramaiah zameer ahmed








