ಕಾಂಗ್ರೆಸ್ ದೃಷ್ಟಿಯಲ್ಲಿ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ : ಬಿಜೆಪಿ ಟ್ವೀಟ್
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಹ್ಯಾಶ್ ಟ್ಯಾಗ್ ಕಾಂಗ್ರೇಸ್ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ನಲ್ಲಿ ಕಾಂಗ್ರೆಸ್ ರಣಹದ್ದುಗಳಿಗೆ ಹುಬ್ಬಳ್ಳಿ ಘಟನೆ ನಿರೀಕ್ಷಿತ ಪ್ರಮಾಣದಲ್ಲಿ ಸಂತೋಷ ನೀಡಿಲ್ಲ. ಸಮಾಜದ ಶಾಂತಿ ಸರ್ವನಾಶವಾಗುವಂಥ ಫಲಿತಾಂಶವನ್ನು ಕಾಂಗ್ರೆಸ್ಸಿಗರು ಬಯಸಿದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ಮಿಂಚಿನ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಭಾಯಿಸಿದ್ದು ಹರಳೆಣ್ಣೆ ಕುಡಿಸಿದ ಅನುಭವ ನೀಡಿದೆ ಎಂದು ಕಿಚಾಯಿಸಿದೆ.
ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಬಂಧನವಾಗಿದೆ.
ಆದರೆ ರಿಂಗ್ ಮಾಸ್ಟರ್ ಯಾರೆಂದು ತಿಳಿಯಬೇಕಲ್ಲವೇ?
ಆ ರಿಂಗ್ ಮಾಸ್ಟರ್ #ಮಹಾನಾಯಕ ಆಗಿರಬಹುದೇ ಅಥವಾ #ಮೀರ್ಸಾದಿಕ್ ಆಗಿರಬಹುದೇ?#CONgressSupportsJihadis
— BJP Karnataka (@BJP4Karnataka) April 22, 2022
ಅಲ್ಲದೇ ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಸೇರಿದಂತೆ 110 ಕ್ಕೂ ಹೆಚ್ಚು ಮತಾಂಧರ ಬಂಧನ. ಪಾದರಾಯನಪುರ ಗಲಭೆಯಲ್ಲಿ 116 ದಂಗೆಕೋರರ ಬಂಧನ. ಉಪ್ಪಿನಂಗಡಿಯ ಠಾಣೆಯ ಮುಂದೆ ಗಲಭೆ ಮಾಡಿದವರ ಬಂಧನ. ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿ ಸೇರಿದಂತೆ 126 ಸಮಾಜ ಘಾತುಕರ ಬಂಧನ ಎನ್ನುವ ಅಂಕಿಅಂಶ ಉಲ್ಲೇಖಿಸಿ ಕಾಂಗ್ರೆಸ್ ಸಪೋರ್ಟ್ಸ್ ಜಿಹಾದ್ ಹ್ಯಾಷ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದೆ.
ಇನ್ನೂ ಹುಬ್ಬಳ್ಳಿ ಗಲಭೆಯನ್ನು ರಾಜ್ಯ ಸರ್ಕಾರ ಕೇವಲ ಮೂರು ಗಂಟೆಯಲ್ಲಿ ತಹಬದಿಗೆ ತಂದಿದೆ, ಮತಾಂಧ ಅಲ್ಪಮತೀಯ ಆರೋಪಿಗಳ ಬಂಧನವಾಗಿದೆ. ಆದರೆ, ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಕಾಂಗ್ರೆಸ್ ಹುಯಿಲೆಬ್ಬಿಸುತ್ತಿದೆ. ಕಾಂಗ್ರೆಸ್ ದೃಷ್ಟಿಯಲ್ಲಿ ಆರೋಪಿಗಳಿಗೆ ಹಲಾಲ್ ಕಬಾಬ್ ನೀಡಿ ಉಪಚರಿಸಬೇಕಿತ್ತೇ? ಎಂದು ಪ್ರಶ್ನಿಸಿದೆ.