ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಪತ್ನಿಯ ಚುನಾವಣಾ ಉಮೇದುವಾರಿಕೆ ರದ್ದುಗೊಳಿಸಿದ ಬಿಜೆಪಿ..!
ಉತ್ತರಪ್ರದೇಶ : 2018ರಲ್ಲಿ ಇಡೀ ದೇಶವನ್ನ ಬೆಚ್ಚಿಬೀಳಿಸಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸೆಂಗರ್ ಪತ್ನಿಯ ಚುನಾವಣಾ ಉಮೇದುವಾರಿಕೆಯನ್ನು ಬಿಜೆಪಿ ರದ್ದುಗೊಳಿಸಿದೆ.
ಜಿಲ್ಲಾ ಪಂಚಾಯತ್ ಚುನಾವಣೆಗೆ ಏಪ್ರಿಲ್ 9ರಂದು ಬಿಜೆಪಿ ಬಿಡುಗಡೆ ಮಾಡಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೆಂಗರ್ ಪತ್ನಿ, ಸಂಗೀತಾ ಸೆಂಗರ್ ಹೆಸರಿತ್ತು. ಸಂಗೀತಾ ಸೆಂಗರ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
6 ವರ್ಷದ ಮಗು ಮೇಲೆ ತಮ್ಮನ ಎದುರೇ ಸಾಮೂಹಿಕ ಅತ್ಯಾಚಾರವೆಸಗಿದ ತಾತ , ಚಿಕ್ಕಪ್ಪ – 20 ರೂ, ಸಮೋಸ ಕೊಟ್ಟ ಕಾಮುಕರು..!







