6 ವರ್ಷದ ಮಗು ಮೇಲೆ ತಮ್ಮನ ಎದುರೇ ಸಾಮೂಹಿಕ ಅತ್ಯಾಚಾರವೆಸಗಿದ ತಾತ , ಚಿಕ್ಕಪ್ಪ – 20 ರೂ, ಸಮೋಸ ಕೊಟ್ಟ ಕಾಮುಕರು..!
ಮಧ್ಯಪ್ರದೇಶ : 6 ವರ್ಷದ ಪುಟ್ಟ ಬಾಲಕಿ ಮೇಲೆ ಆಕೆಯ ತಾತ ಹಾಗೂ ಚಕ್ಕಪ್ಪ ಸೇರಿ , 3 ವರ್ಷದ ತಮ್ಮನ ಎದುರೇ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಸಮೋಸ ಹಾಗೂ 20 ರೂಪಾಯಿ ನೀಡಿ ತಾರಿಗೂ ತಿಳಿಸದಂತೆ ಹೇಳಿದ್ದಾರೆ. ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನ ಕೊಲಾರ್ ಪ್ರದೇಶದಲ್ಲಿ ನಡೆದಿದೆ.
ಘಟನೆ ನಡೆದ 8 ದಿನಗಳ ಬಳಿಕ ಈ ಬಗ್ಗೆ ಮನೆಯವರಿಗೆ ಗೊತ್ತಾಗಿದೆ. ಮಗಳ ಪದೇ ಪದೇ ಬಟ್ಟೆಯಲ್ಲಿನ ರಕ್ತದ ಕಲೆಗಳನ್ನ ತೊಳೆದುಕೊಳ್ತಿದ್ದು, ನೋವಿನಲ್ಲಿ ನರಳುತ್ತಿದ್ದದನ್ನು ಗಮನಿಸಿದ ತಾಯಿ ಆಕೆಯನ್ನ ವಿಚಾರಿಸಿದಾಗ ಮಗು ಎಲ್ಲವನ್ನೂ ಹೇಳಿಕೊಂಡಿದೆ. ತಕ್ಷಣವೇ ಪೋಷಕರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಬಾಲಕಿಯ ಚಿಕ್ಕಪ್ಪ 35 ವರ್ಷದ ಸಂಜಯ್ ಹಾಗೂ ಹಾಗೂ ತಾತ (50 ) ಮದ್ಯವೆಸನಿಗಳಾಗಿದ್ದರು. ಕಳೆದ 8 ದಿನಗಳ ಹಿಂದೆ ಕುಡಿದು ಮನೆಗೆ ಬಂದಿರುವ ಕಾಮುಕರು ಬಾಲಕಿ ಹಾಗೂ ಆಕೆ ತಮ್ಮನನ್ನ ಸಮೋಸ ನೀಡುವುದಾಗಿ ರೂಮ್ ಗೆ ಕರೆದೊಯ್ದಿದ್ದಾರೆ. ಬಳಿಕ ಬಾಲಕಿ ಮೇಲೆ ಅತ್ಯಚಾರಾವೆಸಗಿದ್ದಾರೆ. ಈ ವೇಳೆ ಬಾಲಕಿಗೆ ರಕ್ತಸ್ರಾವವಾಗಿದೆ. ಗಾಬರಿಗೊಂಡಿರುವ ಕಾಮುಕರು ಸಂತ್ರಸ್ತೆ ಹಾಗೂ ಆಕೆಯ ತಮ್ಮನಿಗೆ ಸಮೋಸ ನೀಡಿ, 20 ರೂಪಾಯಿ ಕೊಟ್ಟು ಯಾರಿಗೂ ತಿಳಿಸಂದೆ ಹೇಳಿ ಕಳುಹಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.








