ಜೈಪುರ : ರಾಜಸ್ಥಾನ ರಾಜಕೀಯ ನಾಟಕಕ್ಕೆ ಕೊನೆಗೆ ಬ್ರೇಕ್ ಬಿದ್ದಿದೆ. ಇಂದು ಸಿಎಂ ಅಶೋಕ್ ಗೆಹ್ಲೋಟ್ ರಾಜಸ್ಥಾನ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ರಾಜಸ್ಥಾನದಲ್ಲಿ ಬಿಜೆಪಿಯ ತಂತ್ರಗಾರಿಕೆ ನಡೆಯಲಿಲ್ಲ. ನಮ್ಮ ಸರ್ಕಾರ ಸೇಫ್. ಪಕ್ಷದೊಳಗಿನ ಭಿನ್ನಮತವನ್ನು ಬಳಸಿಕೊಂಡು ಸರ್ಕಾರ ಪತನಗೊಳಿಸುವ ಪ್ರಯತ್ನ ವಿಫಲವಾಗಿದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಮಣಿಪುರ, ಅರುಣಾಚಲ ಪ್ರದೇಶಗಳಲ್ಲಿ ಬಿಜೆಪಿ ನಾಯಕರು ಅನುಸರಿಸಿದ ರಾಜಕೀಯ ಟೆಕ್ನಿಕ್ ರಾಜಸ್ಥಾನದಲ್ಲಿ ವರ್ಕ್ ಔಟ್ ಆಗಲಿಲ್ಲ. ಅವರ ಪಿತೂರಿ ಬಹಿರಂಗವಾಗಿದೆ ಎಂದು ಸಂಭ್ರಮಿಸಿದ್ದಾರೆ.
ಇನ್ನು ಇಂದು ಇಡೀ ರಾಜ್ಯದಲ್ಲಿ ಸಂತಸದ ಅಲೆ ಎದ್ದಿದೆ ಎಂದ ಗೆಹ್ಲೋಟ್, ರಾಜಸ್ಥಾನದಲ್ಲಿ ಬಿಜೆಪಿಯ ಪಿತೂರಿ ವಿಫಲವಾಗಿದೆ. ಇಂದು ಸದನದಲ್ಲಿ ಸಿಕ್ಕ ವಿಶ್ವಾಸಮತದ ಗೆಲುವು ಇದು ರಾಜ್ಯದ ಜನತೆಯ ಗೆಲುವು. ಇನ್ನು ನಾವು ಕೋವಿಡ್ 19 ವಿರುದ್ಧ ಹೋರಾಟಕ್ಕೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.








