ಬಿಜೆಪಿಯ ಅತ್ಯಂತ ಮಹತ್ವಾಕಾಂಕ್ಷೆಯ ‘ಒಂದು ದೇಶ -ಒಂದು ಚುನಾವಣೆ’ ಯೋಜನೆ ಸನ್ನಿಹಿತ ?
ಹೊಸದಿಲ್ಲಿ, ಅಗಸ್ಟ್ 31: ನಿರ್ಣಾಯಕ ಬೆಳವಣಿಗೆಯೊಂದರಲ್ಲಿ, ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಇತ್ತೀಚೆಗೆ ಎಲ್ಲಾ ಸ್ಥಳೀಯ ಸಂಸ್ಥೆಗಳು, ರಾಜ್ಯ ಸಭೆಗಳು ಮತ್ತು ಲೋಕಸಭೆಗಳಿಗೆ ಚುನಾವಣೆಗೆ ದೇಶಕ್ಕೊಂದೇ ಮತದಾರರ ಪಟ್ಟಿಯನ್ನು ತಯಾರಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸಿದೆ.
ಆಗಸ್ಟ್ 13 ರಂದು ನಡೆದ ಸಭೆಯಲ್ಲಿ ವರದಿಗಳ ಪ್ರಕಾರ, ಎರಡು ಪ್ರಮುಖ ಆಯ್ಕೆಗಳನ್ನು ಚರ್ಚಿಸಲಾಗಿದೆ. ಮೊದಲನೆಯದಾಗಿ, ಆರ್ಟಿಕಲ್ 243 K ಮತ್ತು 243ZA ಗೆ ತಿದ್ದುಪಡಿ ಮಾಡಿ ದೇಶಾದಾದ್ಯಂತ ಎಲ್ಲಾ ಚುನಾವಣೆಗಳಿಗೆ ಒಂದೇ ಚುನಾವಣಾ ಪಟ್ಟಿಯನ್ನು ಕಡ್ಡಾಯ ಮಾಡುವುದು ಮತ್ತು ಎರಡನೆಯದಾಗಿ, ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಚುನಾವಣಾ ಆಯೋಗದ (ಇಸಿ) ಮತದಾರರ ಪಟ್ಟಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳನ್ನು ಕೇಳಿಕೊಳ್ಳುವುದು.
ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ವಹಿಸಿದ್ದರು.
ಎಲ್ಲಾ ಚುನಾವಣೆಗಳಿಗೆ ಸಾಮಾನ್ಯ ಮತದಾರರ ಪಟ್ಟಿಯ ಕಲ್ಪನೆಯು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೊಂದಿಗೆ ಸಂಬಂಧ ಹೊಂದಿದೆ – ಈ ಪರಿಕಲ್ಪನೆಯು ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಶಾಸಕರು, ಲೋಕಸಭೆ ಮತ್ತು ಪಂಚಾಯತ್‌ಗಳಿಗೆ ಒಂದೇ ಚುನಾವಣೆಗೆ ಕರೆ ನೀಡುತ್ತದೆ. ಮೋದಿ ಅವರು ಪ್ರಧಾನಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಈ ವಿಚಾರವನ್ನು ಮುಂದಿಡಲು ಪ್ರಯತ್ನಿಸಿದ್ದರು. 2019 ರ ಮೇನಲ್ಲಿ ನಡೆದ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ದೇಶದ ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯೂ ಸೇರಿದೆ. ಇದರಿಂದ ವಿವಿಧ ಸಮಿತಿಗಳ, ಸಂಸ್ಥೆಗಳ, ಸಮಯ ಹಣ ಮತ್ತು ಶಕ್ತಿಯನ್ನು ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ ಮಾಜಿ ಮುಖ್ಯ ಚುನಾವಣಾ ಆಯುಕ್ತರು, ಬದಲಾವಣೆಗೆ ಬೃಹತ್ ಒಮ್ಮತವನ್ನು ನಿರ್ಮಿಸುವ ಅಗತ್ಯವಿದೆ. ಇದು ರಾಜ್ಯಗಳ ಮತ್ತು ಕೇಂದ್ರದ ನಡುವಿನ ಅಭಿಪ್ರಾಯ ಭಿನ್ನತೆಯನ್ನು ಗಮನಿಸಿದರೆ ಅಂದುಕೊಂಡಷ್ಟು ಸುಲಭವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.








