`ಬಿಜೆಪಿಗರ ಶಕುನಿತಂತ್ರ’ ಹೇಳಿಕೆ `ಕಾಂಗ್ರೆಸ್ ಶಕ್ತಿ ಕುಂದಿಸಲ್ಲ’
ಬೆಂಗಳೂರು : ಶಕುನಿತಂತ್ರದ ಹೇಳಿಕೆಗಳ ಮೂಲಕ ಕಾಂಗ್ರೆಸ್ ನ ಶಕ್ತಿ ಕುಂದಿಸಬಹುದೆಂದು ಭ್ರಮೆಯಲ್ಲಿರುವಂತಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಅವರ ಒಳ ರಾಜಕಾರಣವೇ ಕಾರಣ ಎಂದು ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನಾಯಕರಿಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದೆ.
ಸಿದ್ದು ಸವದಿ ಅಭಸ್ಯವರ್ತನೆ : ಇದೇನಾ ಬಿಜೆಪಿ ಸಂಸ್ಕøತಿ ಎಂದ ಹುಲಿಯಾ
ಪರರ ಮನೆಯೊಳಗೆ ವೈಮಸ್ಸು ಮೂಡಿಸಲು ಯತ್ನಿಸುವವರನ್ನ “ಮನೆಹಾಳರು” ಎನ್ನುತ್ತಾರೆ,
ಇತ್ತೀಚಿಗೆ ಬಿಜೆಪಿ ನಾಯಕರ ಈ ರೀತಿಯ ಹೇಳಿಕೆಗಳು ಹೆಚ್ಚುತ್ತಿವೆ,
ಶಕುನಿತಂತ್ರದ ಹೇಳಿಕೆಗಳ ಮೂಲಕ ಕಾಂಗ್ರೆಸ್’ನ ಶಕ್ತಿ ಕುಂದಿಸಬಹುದೆಂಬ ಭ್ರಮೆಯಲ್ಲಿರುವಂತಿದೆ.
ಆರ್ ಅಶೋಕ್, ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮ ತಂತ್ರಗಳು ಫಲಿಸದು.ಮನೆಹಾಳು ತಂತ್ರ ನಡೆಯದು ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ ” ಕಾಂಗ್ರೆಸ್ ಹಾಳಾದರೂ ಸರಿ ಡಿ.ಕೆ.ಶಿವಕುಮಾರ್ ಅವರಿಗೆ ಯಾವುದೇ ಸ್ಥಾನಮಾನ ಸಿಗಬಾರದು ಎಂಬುದು ಸಿದ್ದರಾಮಯ್ಯ ಉದ್ದೇಶ.
ಈ ಕಾರಣಕ್ಕೆ ಚುನಾವಣೆಗಳಲ್ಲಿ ಅವರು ತಮ್ಮ ಪಕ್ಷದ ಸೋಲನ್ನು ಬಯಸುತ್ತಿದ್ದಾರೆ.
ಒಳ ರಾಜಕಾರಣ ಮಾಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ : ಕಟೀಲ್
ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ಪರಂಪರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ.
ಡಾ.ಜಿ. ಪರಮೇಶ್ವರ ಅವರನ್ನು ಸೋಲಿಸಿದಂತೆ ಶಿವಕುಮಾರ್ ಅವರನ್ನು ಸೋಲಿಸಲು ಸಾಧ್ಯವಾಗುದಿಲ್ಲ ಎಂದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel