ಬೆಂಗಳೂರು: ಭಾರತೀಯ ಜನತಾ ಪಕ್ಷವು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅಖಂಡ ಭಾರತ ನಿರ್ಮಾಣದ ಉದ್ದೇಶವನ್ನು ಬಿಜೆಪಿ ಹೊಂದಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಪರಿಕಲ್ಪನೆಯಡಿ ದೇಶದ ಸಮಗ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕರು, ಸಹ ಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿದ ಕಟೀಲ್, ಪ್ರಕೋಷ್ಠಗಳು ಮೊದಲು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸಿದ್ದು, ಇದೀಗ ದೇಶದಾದ್ಯಂತ ವಿಸ್ತರಣೆ ಪಡೆದಿವೆ ಎಂದು ತಿಳಿಸಿದರು.

ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಎಲ್ಲ ರೀತಿಯ ಸಂಪರ್ಕಕ್ಕೆ ಪ್ರಕೋಷ್ಠಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಪ್ರಕೋಷ್ಠಗಳ ರಾಜ್ಯ ಸಂಚಾಲಕ ಭಾನುಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಸ್ವದೇಶಿ ಪರಿಕಲ್ಪನೆ ನೀಡಿದೆ. ಬಿಜೆಪಿ ನಿರಂತರವಾಗಿ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕಾಂಗ್ರೆಸ್ ಪಕ್ಷವು ದುರಾಡಳಿತ ಮತ್ತು ಕುಟುಂಬ ರಾಜಕೀಯದ ಕಾರಣಕ್ಕೆ ನೆಲಕಚ್ಚಿದೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆ ಸ್ ಪಕ್ಷವು ಏಳು ದಶಕಗಳ ಕಾಲ ಅಧಿಕಾರದಲ್ಲಿ ಇದ್ದಾಗ ಕುಟುಂಬ ರಾಜಕಾರಣಕ್ಕಷ್ಟೇ ಆದ್ಯತೆ ನೀಡಿತು. ಸಂಘಟನೆಯನ್ನು ಮರೆತು ಬಿಟ್ಟಿತು.
ಬಿಜೆಪಿ ನಿರಂತರವಾಗಿ ಗುರಿಯತ್ತ ಸಾಗುತ್ತಿದೆ. 370ನೇ ವಿಧಿರದ್ದತಿ, ಉಜ್ವಲಾ ಯೋಜನೆ ಜಾರಿ, ದೇಶದೆಲ್ಲೆಡೆ ಶೌಚಾಲಯ ನಿರ್ಮಾಣಕ್ಕೆ ವ್ಯವಸ್ಥೆ, ಆಯುಷ್ಮಾನ್ ಯೋಜನೆ ಅನುಷ್ಠಾನವು ಪಕ್ಷದ ಸತತ ಗೆಲುವಿಗೆ ಪೂರಕವಾಗಿದೆ ಎಂದು ಅವರು ವಿಶ್ಲೇಷಿಸಿದರು.
ಬಿಜೆಪಿ ಕಾರ್ಯಕರ್ತರು ಸಮಾಜ ಸೇವೆಯನ್ನು ಗುರಿಯಾಗಿ ಇಟ್ಟುಕೊಂಡಿದೆ. ರಾಜ್ಯದಲ್ಲಿ 20 ಪ್ರಕೋಷ್ಠಗಳಿದ್ದು, 90,000 ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲಾಗಿದೆ. ದೇಶದಲ್ಲಿ ಬಿಜೆಪಿ 100 ಶಾಸಕರಿಂದ 1100 ಶಾಸಕರವರೆಗೆ ಬೆಳೆದಿದೆ. ಅತ್ಯಂತ ಬಡವರನ್ನೂ ಸ್ವಾವಲಂಬಿಯನ್ನಾಗಿ ಮಾಡುವುದೇ ದೀನ ದಯಾಳ ಉಪಾಧ್ಯಾಯರ ಚಿಂತನೆಯಾಗಿತ್ತು ಎಂದು ವಿವರಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








