B K Hariprasad | ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿದ್ದರು
ಮೈಸೂರು : ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ, ಅವರು ಬ್ರಿಟಿಷರ ಬೂಟನ್ನು ನೆಕ್ಕಿದ್ದರು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ.
ಕಾಂಗ್ರೆಸ್ ನವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಆದರೆ ಬಿಜೆಪಿಯವರು ನೈಜ ಇತಿಹಾಸವನ್ನು ತಿರುಚಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ. ಅವರು ಬ್ರಿಟಿಷರ ಬೂಟನ್ನು ನೆಕ್ಕಿದ್ದರು.
ಆರು ಬಾರಿ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಒಂದು ಉದಾಹರಣೆ ಇದ್ದರೆ ಕೊಡಲಿ ಸಾಕು ಎಂದು ಸವಾಲು ಹಾಕಿದ್ದಾರೆ.
ಮಹಾತ್ಮಗಾಂಧೀಜಿ ಕೊಂದಂತಹ ಗೋಡ್ಸೆ ಬಿಟ್ಟರೇ ಬೇರಾವ ಮಹಾಪುರುಷ ಇವರಿಗೆ ಸಿಕ್ಕಿರಲಿಲ್ಲ. ಇದೀಗ ಸಾವರ್ಕರ್ ಹೆಸರೇಳಿಕೊಂಡು ತಿರುಗಾಡುತ್ತಿದ್ದಾರೆ. ಸಾವರ್ಕರ್ ಅಪ್ಪಟ ನಾಸ್ತಿಕ.

ನಾಸ್ತಿಕ ಎಂದು ಅವರ ಆತ್ಮಚರಿತ್ರೆಯಲ್ಲೇ ಬರೆದುಕೊಂಡಿದ್ದಾರೆ. ನಾಸ್ತಿಕ ಸಾವರ್ಕರ್ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡುವ ಮೂಲಕ ಹಿಂದೂ ಧರ್ಮಕ್ಕೆ ಅಪಮಾನ ಮಾಡಲು ಹೊರಟಿದ್ದಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಬಿಜೆಪಿ ಅತಿ ದೊಡ್ಡ ಶ್ರೀಮಂತ ಪಕ್ಷ, ಆರ್ ಎಸ್ ಎಸ್ ಅತಿದೊಡ್ಡ ಶ್ರೀಮಂತ ಎನ್ ಜಿ ಒ ಸಂಘಟನೆಯಾಗಿದೆ.
ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಕಾಂಗ್ರೆಸ್ ಗಿಂತ ಬಿಜೆಪಿ ಶ್ರೀಮಂತ ಪಕ್ಷವಾಗಲು ಹೇಗೆ ಸಾಧ್ಯವಾಯಿತು.
50% ಕಮಿಷನ್ ಪಡೆಯುತ್ತಿರುವ ಕಾರಣದಿಂದಲೇ ಬಿಜೆಪಿ, ಆರ್ ಎಸ್ ಎಸ್ ಶ್ರೀಮಂತ ಆಗಿವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.








