ಕನಸಲ್ಲೂ ಶತ್ರುಗಳ ಬೆವರಿಳಿಬಲ್ಲ ನಮ್ಮ ಹೆಮ್ಮೆಯ ಬ್ಲಾಕ್ ಕ್ಯಾಟ್ ಕಮಾಂಡೋ ಪಡೆ ಬಗ್ಗೆ ನಿಮಗೆಷ್ಟು ಗೊತ್ತು..?
ಈ ವಿಶೇಷ ಭದ್ರತಾ ಪಡೆಯ ಹೆಸರು ಕೇಳಿದ್ರೆ ಸಾಕು ಶತ್ರುಗಳು ಬೆವರುತ್ತಾರೆ. ದೇಶದಲ್ಲಿ ಎಂಥದ್ದೇ ಅಪಾಯಕಾರಿ ಸನ್ನಿವೇಶ ಎದುರಾದರೂ ಈ ವಿಶೇಷ ಭದ್ರತಾ ಪಡೆ ಕೆಚ್ಚೆದೆಯಿಂದ ಹೋರಾಡುತ್ತದೆ. ಎನ್ ಎಸ್ ಜಿ ಕಮಾಂಡೋಗಳ ಕುರಿತಾದ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ನಿಮಗಾಗಿ ಹೊತ್ತು ತಂದಿದ್ದೀವಿ.
ಕೇಂದ್ರೀಯ ಪೊಲೀಸ್ ಪಡೆ ಮತ್ತು ಭಾರತೀಯ ಸೇನೆಯಿಂದ ಎನ್ ಎಸ್ ಜಿ ಕಮಾಂಡೋ ಗಳ ಆಯ್ಕೆ ನಡೆಯುತ್ತದೆ. ಪಂಜಾಬ್ ನಲ್ಲಿ 1984 ರಲ್ಲಿನಡೆದ ಬ್ಲೂ ಸ್ಟಾರ್ ಕಾರ್ಯಾಚರಣೆ ಬಳಿಕ ಈ ವಿಶೇಷ ಭದ್ರಾತ ಪಡೆಯನ್ನು ಸ್ಥಾಪಿಸಲಾಯಿತು. ಕಠಿಣ ಪರಿಸ್ಥಿತಿಯನ್ನು ಎದುರಿಸಲು ಈ ಕಮಾಂಡೋಗಳಿಗೆ ಸಾಕಷ್ಟು ತರಬೇತಿಯನ್ನು ನೀಡಲಾಗುತ್ತದೆ.
ಆಯ್ಕೆಗೂ ಮುನ್ನ ಮೂರು ತಿಂಗಳ ಮತ್ತು ಆಯ್ಕೆಯ ಬಳಿಕ ಒಂಭತ್ತು ತಿಂಗಳ ಅತಿ ಕಠಿಣ ತರಬೇತಿಯನ್ನು ಎನ್ ಎಸ್ ಜಿ ಕಮಾಂಡೋಗಳಿಗೆ ನೀಡಲಾಗುತ್ತದೆ. ತುರ್ತು ಸಂದರ್ಭಗಳನ್ನು ನಿಭಾಯಿಸಲು ಈ ಪಡೆ ಸದಾ ಸರ್ವ ಸನ್ನದ್ಧವಾಗಿರುತ್ತದೆ.
26/11 ರ ಮುಂಬೈ ಉಗ್ರ ದಾಳಿ ಮತ್ತು ಪಠಾಣ್ ಕೋಟ್ ಮೇಲಿನ ಉಗ್ರದಾಳಿಯ ಸಂದರ್ಭದಲ್ಲಿ ಎನ್ ಎಸ್ ಜಿ ಕಮಾಂಡೋಗಳು ಮಹತ್ವದ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ಎನ್ ಎಸ್ ಜಿ ಪಡೆಯನ್ನು ಬ್ಲಾಕ್ ಕ್ಯಾಟ್ಸ್ ಎಂತಲೂ ಕರೆಯುತ್ತಾರೆ. ಪ್ರಭಾವಿ ವ್ಯಕ್ತಿಗಳಿಗೆ ವಿಶೇಷ ಭದ್ರತೆ ನೀಡುವಲ್ಲಿ ಈ ಪಡೆ ಮಹತ್ವದ ಪಾತ್ರ ವಹಿಸುತ್ತದೆ.
ಎನ್ ಎಸ್ ಜಿ ಯಲ್ಲಿ ವಿಶೇಷ ರೇಂಜರ್ ಗುಂಪು ಮತ್ತು ವಿಶೇಷ ಕಾರ್ಯಾಚರಣೆ ಗುಂಪು ಎಂಬ ಎರಡು ವಿಭಾಗಗಳಿವೆ. ಭೂಮಿ, ಜಲ ಮತ್ತು ವಾಯುಮಾರ್ಗದ ಮೂಲಕ ಎದುರಾಗುವ ಸಮಸ್ಯೆಗಳ ಕಾರ್ಯಾಚರಣೆಗೆ ಈ ಪಡೆ ತಯಾರಿರುತ್ತದೆ.
ಸರ್ವತ್ರ ಸರ್ವೋತ್ತಮ ಸುರಕ್ಷೆ ಎಂಬುದು ಇವರ ಧ್ಯೇಯವಾಕ್ಯ. ಇನ್ನು ಎನ್ ಎಸ್ ಜಿ ಕಮಾಂಡೋ ಆಗುವುದು ಅಷ್ಟು ಸುಲಭದ ಮಾತಲ್ಲ. ತೀರಾ ಕಠಿಣ ತರಬೇತಿಯ ಮೊದಲರ್ಧ ದಲ್ಲಿಯೇ ಅರ್ಧಕ್ಕರ್ಧ ಜನರು ತರಬೇತಿ ಎದುರಿಸಲಾಗದೇ ಹೊರಬೀಳುತ್ತಾರೆ. ಶಸ್ತ್ರಾಸ್ತ್ರ ಗಳಿಲ್ಲದಿದ್ದರೂ ಶತ್ರುವನ್ನು ಸದೆಬೆಇಯುವ ಕಲೆ ಇವರಿಗೆ ಕರಗತವಸಗಿರುತ್ತದೆ. ಆಪರೇಷನ್ ಬ್ಲಾಕ್ ಥಂಡರ್, ಆಪರೇಷನ್ ಅಶ್ವಮೇಧ, ಅಕ್ಷರಧಾಮ ಅಟ್ಯಾಕ್, ಮುಂಬೈ ಭಯೋತ್ಪಾದಕ ದಾಳಿ, ಪಠಾಣ್ ಕೋಟ್ ದಾಳಿಯಲ್ಲಿ ಈ ಕಮಾಂಡೋಗಳ ಹೋರಾಟ ಸ್ಮರಣೀಯ.