ವಾಮಾಚಾರಕ್ಕೆ ಬಲಿಯಾದ ವೃದ್ಧ ದಂಪತಿ
ಮಧ್ಯಪ್ರದೇಶ : ವಾಮಾಚಾರ ನಡೆಸಿದ್ದಾರೆಂದು , ವೃದ್ಧ ದಂಪತಿಯ ಜೀವವನ್ನ ಅವರ ಅವರ ಸೋದಳಿಯ ತೆಗೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..
ಸುಮೇರ್ ಸಿಂಗ್ ಕುಲಸ್ತೆ (60) ಮತ್ತು ಅವರ ಪತ್ನಿ ಸಿಯಾಬಾಯಿ ಮೃತರಾಗಿದ್ದಾರೆ. 27 ವರ್ಷದ ದಯಾರಾಮ್ ಕುಲಸ್ತೆ ಬಂಧಿತ ಆರೋಪಿಯಾಗಿದ್ದಾನೆ.
ಚೌರೈ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು ತಡವಾಡಗಿ ಬೆಳಕಿಗೆ ಬಂದಿದೆ.. ದಂಪತಿಯನ್ನು ಕೊಂದು ಅವರ ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ. ಆರೋಪಿಯನ್ನು ಸೋಮವಾರ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿನೋಟಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ..
ಮೃತ ದಂಪತಿ ಮಾಡಿದ ಮಾಠಮಂತ್ರದಿಂದಾಗಿ ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನುಮಾನಿಸಿ ಆರೋಪಿ ದಯಾರಾಮ್ ಕುಲಸ್ತೆ ಈ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.








