ಶಿವಮೊಗ್ಗ: ರಸ್ತೆಯಲ್ಲೇ ಹಸುವನ್ನು ಕರಿ ಚಿರತೆಯೊಂದು ತಿಂದು ಹಾಕಿರುವ ಘಟನೆ ನಡೆದಿದೆ.
ಜೋಗ ಜಲಪಾತಕ್ಕೆ ಹೋಗುವ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಹೀಗಾಗಿ ಈ ಸಂದರ್ಭದಲ್ಲಿ ಜೋಗ ವೀಕ್ಷಣೆಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಎಚ್ಚರವಾಗಿರುವಂತೆ ಸೂಚಿಸಲಾಗಿದೆ. ಜೋಗ ಜಲಪಾತಕ್ಕೆ (Jog Falls) ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು (Black Leopard) ಹಸುವನ್ನು ಬೇಟೆಯಾಡಿದೆ.
ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ ಎನ್ನಲಾಗಿದೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದನ್ನು ಕಂಡು ಸವಾರರು ಗಾಬರಿ ವ್ಯಕ್ತಪಡಿಸುತ್ತಿದ್ದಾರೆ.