black squirrel playing with ball-ಮುದ್ದಾದ ಪ್ರಾಣಿಗಳ ವೀಡಿಯೊಗಳಿಗಾಗಿ ನೀವು ಇಂಟರ್ನೆಟ್ ನಲ್ಲಿ ಆಗಾಗ ಸರ್ಚ ಮಾಡುವವರಾಗಿದ್ದೀರಾ? ಹಾಗಿದ್ದರೆ ಈ ವಿಡಿಯೋ ಖಚಿತವಾಗಿ ನಿಮ್ಮ ಮನಸ್ಸನ್ನ ಮುದಗೊಳಿಸಲಿದೆ.
ಹೌದು ನಿಮಗೆ ಸಂತೋಷ ಉಂಟುಮಾಡುವ, ಮುಖದ ಮೇಲೆ ಮುಗುಳ್ನಗೆ ತರಿಸುವ ವೀಡಿಯೊ ಇಲ್ಲಿದೆ.
@buitengebieden ಎಂಬ ಹೆಸರಿನ ಬಳಕೆದಾರರೊಬ್ಬರು ಈ ವೀಡಿಯೊವನ್ನು Twitter ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಹಿತ್ತಲಿನಲ್ಲಿ ನೀಲಿ ಬಣ್ಣದ ಚೆಂಡಿನೊಂದಿಗೆ ಆಟವಾಡುತ್ತಿರುವ ಮುದ್ದಾದ ಕಪ್ಪು ಅಳಿಲನ್ನು ಕಾಣಬಹುದಾಗಿದೆ
ವೀಡಿಯೊವನ್ನು ಕೆಲವು ಗಂಟೆಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಈಗಾಗಲೇ 9.2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 37,800 ಕ್ಕೂ ಹೆಚ್ಚು ಲೈಕ್ ಮತ್ತು ಹಲವಾರು ಕಾಮೆಂಟ್‌ಗಳನ್ನ ಪಡೆದಿದೆ.
“ನಾನು ಅಳಿಲುಗಳನ್ನ ಪ್ರೀತಿಸುತ್ತೇನೆ! ಮತ್ತು ಅದನ್ನ ನೋಡಿಕೊಳ್ಳುತ್ತಿದ್ದೇನೆ. ಪ್ರತಿದಿನ ಕೈಯಲ್ಲಲಿ ಏನಾದರು ಹಿಡಿದು ತಿನ್ನಿಸುತ್ತಿದ್ದೆ. ಅವಳು ಪ್ರತಿದಿನ ಬೆಳಿಗ್ಗೆ ಅಹಾರಕ್ಕಾಗಿ ಬಾಗಿಲಿನ ಬಳಿ ಕಾಯುತ್ತಿದ್ದಳು. ಅವಳ ಹೆಸರು ಫ್ರಾಂಕಿ” ಎಂದು ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.
“ನಾನು ಕಪ್ಪು ಅಳಿಲು ನೋಡಿಲ್ಲ! ಇದು ಸುಂದರವಾಗಿದೆ!” ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ನಾನು ಬಹಳ ಸಮಯದಿಂದ ಕಪ್ಪು ಅಳಿಲನ್ನು ನೋಡಿಲ್ಲ. ಸಾಕಷ್ಟು ಬೂದು ಬಣ್ಣದ ಅಳಿಲೂ ನೋಡಿದ್ದೆನೆ ಆದರೆ ಕಪ್ಪು ಬಣ್ಣ ದ ಅಳಿಲೂ ನೋಡಿ ಯೇ ಇಲ್ಲ. ನನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಬಿಳಿ ಬಣ್ಣದ ಅಳಿಲೂ ನೋಡಿದೆ” ಎಂದು ಮೂರನೆಯವರು ಬರೆದಿದ್ದಾರೆ.
Scrat finally found his nut.. 😅 pic.twitter.com/LlBLH0tC9n
— Buitengebieden (@buitengebieden) October 10, 2022








