ನೀರೆಂದು ಸ್ಯಾನಿಟೈಸರ್ ಕುಡಿದ ಅಧಿಕಾರಿ..!
ಮುಂಬೈ : ಬಿಎಂಸಿ ಉಪ ಕಮಿಷನರ್ ನೀರೆಂದು ಸ್ಯಾನಿಟೈಸರ್ ಕುಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಂದು ನಾಗರಿಕ ಸಂಸ್ಥೆಯ ಶಿಕ್ಷಣ ಬಜೆಟ್ ಮಂಡಿಸುವಾಗ ಉಪ ಕಮಿಷನರ್ ರಮೇಶ್ ಪವಾರ್ ನೀರೆಂದುಕೊಂಡು ಸ್ಯಾನಿಟೈಸರ್ ಕುಡಿದ್ದಾರೆ.
ವಿಡಿಯೋದಲ್ಲಿ, ರಮೇಶ್ ಅವರು ಬಂದು ಖರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ನೀರಿನ ಬಾಟಲ್ ಪಕ್ಕದಲ್ಲೇ ಸ್ಯಾನಿಟೈಸರ್ ಬಾಟ್ಲಿಯನ್ನ ಕೂಡ ಇರಿಸಲಾಗಿತ್ತು.
ಬಜೆಟ್ ಮಂಡಿಸುವ ಮೊದಲು ರಮೇಶ್ ಪವಾರ್ ಸ್ವಲ್ಪ ನೀರು ಕುಡಿಯಲು ನಿರ್ಧರಿಸಿ, ನೀರೆಂದುಕೊಂಡು ಸ್ಯಾನಿಟೈಸರ್ ಬಾಟ್ಲಿ ತೆಗೆದುಕೊಂಡು ಕುಡಿದಿದ್ದಾರೆ.
BMC Assistant Commissioner Ramesh Pawar mistakenly had a sip of Sanitizer instead of Water during #BMCBudget. pic.twitter.com/Eks3XamoUg
— Shivangi Thakur (@thakur_shivangi) February 3, 2021
ಅದರ ರುಚಿಗೊತ್ತಾಗುತ್ತಿದ್ದಂತೆ ಅದನ್ನ ವಾಪಸ್ ಉಗುಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel