ಸೋಮವಾರದಿಂದ ರಸ್ತೆಗಿಳಿಯಲಿವೆ ಬಿಎಂಟಿಸಿ BMTC ಬಸ್ ಗಳು..!
ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಬಿಎಂಟಿಸಿ ಬಸ್ ಸಂಚಾರ ಸೋಮವಾರದಿಂದ ರಸ್ತೆಗಿಳಿಯುವುದು ಖಚಿತವಾಗಿದೆ.
ಜೂನ್ 21 ಕ್ಕೆ ಸದ್ಯ ಜಾರಿಯಲ್ಲಿರುವ ಲಾಕ್ ಡೌನ್ ಅವಧಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದ ಅನ್ ಲಾಕ್ ಮಾಡಲು ಮುಂದಾಗಿದೆ.
ಅದರಂತೆ ಬಿಎಂಟಿಸಿ ಬಸ್ ಗಳ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ನಾಳೆ ಹಾಗೂ ನಾಡಿದ್ದು ಬಸ್ ಸಿಬ್ಬಂದಿಗೆ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ.
ಕರ್ತವ್ಯಕ್ಕೆ ಹಾಜರಾಗುವ ಮುನ್ನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರೋದ್ರಿಂದ ನಾಳೆ ಆಯಾಯ ಘಟಕದಲ್ಲಿ ಟೆಸ್ಟಿಂಗ್ ಕ್ಯಾಂಪ್ ಇರಿಸಲಾಗುತ್ತದೆ. ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಘಟಕದ ವ್ಯವಸ್ಥಾಪಕರು ಈಗಾಗಲೇ ಸೂಚನೆ ನೀಡಿದ್ದಾರೆ.
ಇತ್ತ ಕೆಎಸ್ ಆರ್ ಟಿಸಿ ಬಸ್ ಗಳು ಸೋಮವಾರದಿಂದ ರಸ್ತೆಗಳಿಯುವ ಸಾಧ್ಯತೆಗಳು ಹೆಚ್ಚಿವೆ.









