ಮೇ 17ರಂದು ಲಾಕ್ ಡೌನ್ ಮೂರನೇ ಹಂತ ಮುಗಿಯಲಿದೆ. ನಾಲ್ಕನೇ ಹಂತದಲ್ಲಿ ಏನೆಲ್ಲ ಇರಲಿದೆ ಎಂಬ ಪ್ರಶ್ನೆಗೆ ಸಂಜೆ ವೇಳೆಗೆ ಉತ್ತರ ಸಿಗುವ ಸಾಧ್ಯತೆಗಳಿವೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆ ಖಚಿತವಾಗಿದೆ. ಈ ಬಗ್ಗೆ ಬಿಎಂಟಿಸಿ ಆಡಳಿತ ಮಂಡಳಿ ಸಿಬ್ಬಂದಿಗೆ ಅಧಿಕೃತ ಆದೇಶ ನೀಡಿದೆ.
ಇನ್ನು ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವ ಮೊದಲು ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿದೆ. ಸೋಮವಾರ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಹಾಗಾಗಿ ಬೆಂಗಳೂರಿನ 6 ಬಿಎಂಟಿಸಿ ಡಿಪೋದಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿದೆ. ತಪಾಸಣೆ ವೇಳೆ ದೇಹದ ಉಷ್ಣತೆ, ಬಿಪಿ, ಶುಗರ್ ಸೇರಿದಂತೆ ಅವರ ವಾಸದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
ಬಿಎಂಟಿಸಿಯಲ್ಲಿ ಕೆಲವು ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ. ಹಾಗೆ 25ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್ ಗೆ ಹಾಕುವಂತಿಲ್ಲವೆAಬ ನಿಯಮ ಜಾರಿಗೆ ಬಂದಿದೆ.








