ಮುಂಬಯಿ: ಇತ್ತೀಚಿಗಷ್ಟೇ ಮುಂಬಯಿ ಕರಾವಳಿಯಲ್ಲಿ (Mumbai) ನಡೆದ ಬೋಟ್ ಅಪಘಾತದಲ್ಲಿ 13 ಜನರು ದಾರುಣವಾಗಿ ಸಾವನ್ನಪ್ಪಿರುವ ಘನಟೆ ನಡೆದಿತ್ತು. ಅಲ್ಲದೇ 7 ವರ್ಷದ ಬಾಲಕ ನಾಪತ್ತೆಯಾಗಿದ್ದ. ಈಗ ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆಯಾಗಿದೆ.
ಡಿ.18 ರಂದು ನೀಲಕಮಲ್ ಎಂಬ ಪ್ರಯಾಣಿಕ ಹಡಗಿಗೆ ನೌಕಾಪಡೆಯ ಬೋಟ್ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ಜನರು ಸಾವನ್ನಪ್ಪಿದ್ದರು. 7 ವರ್ಷದ ಮೊಹಮ್ಮದ್ ನಿಸಾರ್ ಅಹ್ಮದ್ ಪಠಾಣ್ ನಾಪತ್ತೆಯಾಗಿದ್ದ. ಹೀಗಾಗಿ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿತ್ತು. ನೌಕಾಪಡೆಯ ಹೆಲಿಕಾಪ್ಟರ್ ಹಾಗೂ ಗಾರ್ಡ್ ದೋಣಿಗಳ ಮೂಲಕ ಕಳೆದ ಮೂರು ದಿನಗಳಿಂದ ಮೃತದೇಹಕ್ಕಾಗಿ ಶೋಧ ನಡೆಸಲಾಗಿತ್ತು. ಡಿ.21 ರಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.