ಲಂಡನ್: ಲಂಡನ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯ ಶವ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
ಯುಕೆಯಲ್ಲಿ ಭಾರತೀಯ ಮೂಲದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕಳೆದ ತಿಂಗಳಿಂದ ನಾಪತ್ತೆಯಾಗಿದ್ದ ಎನ್ನಲಾಗಿದೆ.
ಮಿತ್ಕುಮಾರ್ ಪಟೇಲ್ ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ತೆರಳಿದ್ದರು. ಅವರು ನ. 17ರಂದು ನಾಪತ್ತೆಯಾಗಿದ್ದರು. ಈಗ ವಿದ್ಯಾರ್ಥಿಯ ಶವ ಲಂಡನ್ನ ಕ್ಯಾನರಿ ವಾರ್ಫ್ ಪ್ರದೇಶದ ಹತ್ತಿರ ಇರುವ ಥೇಮ್ಸ್ ನದಿಯಲ್ಲಿ ಶವ ಪತ್ತೆಯಾಗಿದೆ.
ಪಟೇಲ್ ರೈತ ಕುಟುಂಬಕ್ಕೆ ಸೇರಿದ್ದವನಾಗಿದ್ದು, ಹಳ್ಳಿಯಲ್ಲಿ ವಾಸಿಸುತ್ತಿದ್ದ.