ಈ ಮೊದಲು ಕುದುರೆಗೆ ಹುಲ್ಲು ತಿನಿಸಿ, ಮೈ ಕೈ ಕೆಸರು ತುಂಬಿ ಕೊಂಡಿದ್ದ ಫೋಟೋ ಶೇರ್ ಮಾಡುವ, ಹೀಗೆ ಅನೇಕ ವಿಚಾರಗಳಲ್ಲಿ ಸುದ್ದಿಗೆ ಬಂದಿದ್ದ ಬಾಲಿವುಡ್ ಸುಲ್ತಾನ ಸಲ್ಮಾನ್ ಖಾನ್ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಬಂದಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿತ್ತು. ಅಂದಿನಿಂದ ತಮ್ಮ ಪನ್ವೆಲ್ ಫಾರ್ಮ್ ಹೌಸ್‌ನಲ್ಲೇ ಉಳಿದುಕೊಂಡಿರುವ ಸಲ್ಲು ತಮ್ಮನ್ನು ತಾವು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಲ್ಮಾನ್ ಹೊಲದಲ್ಲಿ ಟ್ರ್ಯಾಕ್ಟರ್ ಏರಿ ಗದ್ದೆಯಲ್ಲಿ ಉಳುಮೆ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೆಲ ಸ್ಥಳೀಯರು ಸಲ್ಲು ಹೊಲ ಊಳಿರುವ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಇದಕ್ಕೂ ಮೊದಲು ಸಲ್ಮಾನ್ ಅವರು ರೈತರ ಪರವಾಗಿ ತಮ್ಮ ಇನ್ ಸ್ಟಾಗ್ರಾಂ ಹಾಕಿದ್ದ ಪೋಸ್ಟ್ ಕೂಡ ಭಾರೀ ಚರ್ಚೆಗೆ ಈಡಾಗಿತ್ತು. ಆ ಫೋಟೋದಲ್ಲಿ ಮೈ-ಕೈ ತುಂಬ ಕೆಸರು ಮಾಡಿಕೊಂಡಿದ್ದ ಸಲ್ಲು ಎಲ್ಲರೂ ಅನ್ನದಾತರನ್ನು ಗೌರವಿಸಿ ಎಂದು ಕಿವಿಮಾತು ನೀಡಿದ್ರು. ಆದ್ರೆ ಅವರ ಪೋಸ್ಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಅನ್ನದಾತರು ಹೀಗೆ ಹೊಲದಲ್ಲಿ ಫೋಟೋ ಶೂಟ್ ಮಾಡಿಸ್ತಾರಾ ಎಂದು ಕಾಲೆಳೆದಿದ್ರೆ ಇನ್ನೂ ಕೆಲವರು ನೆಚ್ಚಿನ ನಟನ ಪೋಸ್ಟ್ ಗೆ ಫಿದಾ ಆಗಿದ್ದೂ ಉಂಟು..
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...








