ಬಾಲಿವುಡ್ ನಟ ಸಂಜಯ್ ದತ್ ಲೀಲಾವತಿ ಆಸ್ಪತ್ರೆಗೆ ದಾಖಲು
ಮುಂಬೈ, ಅಗಸ್ಟ್ 8: ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಶನಿವಾರ ಸಂಜೆ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಆಮ್ಲಜನಕ ಮಟ್ಟದಲ್ಲಿ ಏರಿಳಿತ ಮತ್ತು ಎದೆ ನೋವು ಕಾಣಿಸಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಕ್ಷಿಪ್ರ ಆಂಟಿಜೆನ್ ಪರೀಕ್ಷೆಯ ಮೂಲಕ ಅವರಿಗೆ ಕೋವಿಡ್ -19 ಪರೀಕ್ಷೆ ನಡೆಸಲಾಗಿದ್ದು ಅದು ನೆಗೆಟಿವ್ ಬಂದಿದೆ. . ಆರ್ಟಿ ಪಿಸಿಆರ್ ಗಾಗಿ ಸ್ವ್ಯಾಬ್ ತೆಗೆದುಕೊಳ್ಳಲಾಗಿದೆ.

61 ವರ್ಷದ ಸಂಜಯ್ ದತ್ ರನ್ನು ನಾನ್-ಕೋವಿಡ್ ಐಸಿಯು ವಾರ್ಡ್ಗೆ ದಾಖಲಿಸಲಾಗಿದೆ. ವೈದ್ಯರು ಹೆಚ್ಚಿನ ತನಿಖೆ ನಡೆಸಿ ಕೆಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಅವರ ಆರೋಗ್ಯ ಸ್ಥಿರವಾಗಿದೆ ಎಂದು ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ವಿ ವಿ ರವಿಶಂಕರ್ ಹೇಳಿದ್ದು, ನಾನ್-ಕೋವಿಡ್ ರೋಗಿಗಳಿಗೆ ಅನುಸರಿಸುವ ಚಿಕಿತ್ಸೆಯ ಪ್ರೋಟೋಕಾಲ್ ನಡೆಯುತ್ತಿದೆ ಎಂದು ಹೇಳಿದ್ದಾರೆ.








