ಕರುನಾಡ ಜನರ ಸಹಾಯಕ್ಕೆ ಧಾವಿಸಿದ ಮತ್ತಿಬ್ಬರು ಬಾಲಿವುಡ್ ನ ಸ್ಟಾರ್ ಗಳು
ಮುಂಬೈ : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಸ್ಯಾಂಡಲ್ ವುಡ್ , ಬಾಲಿವುಡ್ , ಟಾಲಿವುಡ್ , ಕಾಲಿವುಡ್ ನ ಅನೇಕ ಸಿನಿಮಾ ತಾರೆಯರು ಬಡವರಿಗೆ , ಕೋವಿಡ್ ಸೋಂಕಿತರಿಗೆ ತಮಗೆ ತೋಚಿದ ಸಹಾಯಗಳನ್ನ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ , ಶ್ರೀಮುರುಳಿ, ರಾಗಿಣಿ, ಅಕ್ಷಯ್ ಕುಮಾರ್ , ಸಲ್ಮಾನ್ ಖಾನ್ , ಸೋನು ಸೂದ್ , ಹೀಗೆ ಹಲವರು ಕಷ್ಟದ ಸಂದರ್ಭದಲ್ಲಿ ಸಹಾಯಾಸ್ತ ಚಾಚಿದ್ದಾರೆ. ಇನ್ನೂ ಸೋನು ಸೂದ್ ಸದೇರಿದಂತೆ ಕೆಲ ಬಾಲಿವುಡ್ ನಟರು ಸಹ ಈಗಾಗಲೇ ನಮ್ಮ ರಾಜ್ಯಕ್ಕೆ , ಬೆಂಗಳುರಿಗರಿಗೆ ನೆರವಾಗಿದ್ದಾರೆ..
ಇದೀಗ ಮತ್ತಿಬ್ಬರು ಬಾಲಿವುಡ್ ನ ಸ್ಟಾರ್ ಗಳು ಕರುನಾಡ ಜನರ ಸಹಾಯಕ್ಕೆ ಬಂದಿದ್ದಾರೆ.. ಖ್ಯಾತ ನಟಿ ಭೂಮಿ ಪಡ್ನೇಕರ್ ಮತ್ತು ಹಾಸ್ಯ ನಟ ಕಪಿಲ್ ಶರ್ಮಾ ಕರ್ನಾಟಕಕ್ಕೆ ವೈದ್ಯಕೀಯ ಸಹಾಯ ನೀಡ್ತಿದ್ದಾರೆ. “ಮಿಷನ್ ಜಿಂದಗಿ-ಚೇಂಜ್ ವಿದಿನ್” ಅಭಿಯಾನದ ಮೂಲಕ ಇಬ್ಬರು ಜೊತೆಯಾಗಿ ಸಹಾಯಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಇಬ್ಬರು ಸ್ಟಾರ್ ಗಳು ನೀಡಿದ ಆಕ್ಸಿ ಬಸ್ಗಳು ಕರ್ನಾಟಕ ತಲುಪಿವೆ. ಹೊಸಕೋಟೆಯ ಕೋವಿಡ್ ಆಸ್ಪತ್ರೆ ಎದುರು ಆಕ್ಸಿಜನ್ ಸಂಚಾರಿ ಬಸ್ ಗಳು ಸೇವೆಗೆ ಸಜ್ಜಾಗಿ ನಿಂತಿವೆ. ಕೋವಿಡ್ ಆಸ್ಪತ್ರೆಗಳು ತುರ್ತು ಬಳಕೆಗೆ ಈ ಬಸ್ ಗಳನ್ನ ಬಳಸಬಹುದಾಗಿದೆ.
ಕೊರೊನಾ ಎರಡನೇ ಅಲೆ ಸಣ್ಣ ಸಣ್ಣ ಗ್ರಾಮಗಳನ್ನ ಪ್ರವೇಶಿಸಿದೆ. ನೆರವು ಕೇವಲ ನಗರಗಳಿಗೆ ಸೀಮಿತ ಆಗಬಾರದು. ಗ್ರಾಮೀಣ ಭಾರತದತ್ತ ನಮ್ಮ ಗಮನ ಕೇಂದ್ರಿಕರಿಸಿದ್ದೇವೆ. ಕರ್ನಾಟಕದ ಕೆಲ ಜಿಲ್ಲೆಗಳಿಂದಲೇ ನೆರವು ಅಭಿಯಾನ ಆರಂಭವಾಗಲಿದೆ ಎಂದು ಭೂಮಿ ಪಡ್ನೇಕರ್ ಹೇಳಿದ್ದಾರೆ.
ಆಸ್ಪತ್ರೆಗಳ ಮುಂದೆ ಆಕ್ಸಿಜನ್ ಸಾಂದ್ರಕ ಅಳವಡಿಸಿರೋ ಬಸ್ ನಿಲ್ಲಿಸಲಾಗಿದೆ. ರೋಗಿಗಳು ಆಸ್ಪತ್ರೆ ಎದುರು ಬೆಡ್ಗಾಗಿ ಕಾಯುವಾಗ ಈ ಬಸ್ ನಲ್ಲಿ ಆಕ್ಸಿಜನ್ ಒದಗಿಸಲಾಗುತ್ತೆ. ಹಾಗಾಗಿ ಕೋವಿಡ್ ಆಸ್ಪತ್ರೆ ಮುಂದೆ ತುರ್ತು ಬಳಕೆಗೆ ಬಸ್ಗಳನ್ನ ಮೀಸಲಿರಿಸಲಾಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.