ಬಾಲಿವುಡ್ನ ಖ್ಯಾತ ಹಿನ್ನಲೆ ಗಾಯಕ ಬಪ್ಪಿ ಲಹರಿ ನಿಧನ Saaksha Tv
ಮುಂಬೈ: ಬಾಲಿವುಡ್ನ ಖ್ಯಾತ ಗಾಯಕ, ಸಂಗೀತ ನಿದೇರ್ಶಕ ಬಪ್ಪಿ ಲಹರಿ ಅನಾರೋಗ್ಯದಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
69 ವರ್ಷದ ಬಪ್ಪಿ ಲಹರಿ ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದಾಗಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯರಾತ್ರಿ OSA (ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ) ಕಾರಣದಿಂದಾಗಿ ನಿಧನರಾದರು ಎಂದು ಕ್ರಿಟಿಕೇರ್ ಆಸ್ಪತ್ರೆಯ ನಿರ್ದೇಶಕ ಡಾ ದೀಪಕ್ ನಾಮಜೋಶಿ ಸುದ್ದಿ ವಾಹಿನಿಗೆ ತಿಳಿಸಿದರು.
ಬಪ್ಪಿ ಲಹರಿ 1970-80ರ ದಶಕದಲ್ಲಿ ಬಾಲಿವುಡ್ನಲ್ಲಿ ಮಿಂಚಿದ ಹಾಡುಗಾರ. ಬಾಲಿವುಡ್ನಲ್ಲಿ ಹಲವು ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಅವರು, 1970-80ರ ದಶಕದಲ್ಲಿ ಸದ್ದು ಮಾಡಿದ್ದ ಚಲ್ತೆ ಚಲ್ತೆ, ಡ್ಯಾನ್ಸ್ ಡ್ಯಾನ್ಸ್, ಡಿಸ್ಕೋ ಡ್ಯಾನರ್ ಮತ್ತು ಶರಾಬಿ ಮುಂತಾದ ಹಲವಾರು ಜನಮೆಚ್ಚಿದ ಹಾಡುಗಳಿಂದ ಹೆಸರುವಾಸಿಯಾಗಿದ್ದರು. 2020ರಲ್ಲಿ ತೆರೆಕಂಡ ಭಾಗಿ-3 ಚಿತ್ರದ ಟೈಟಲ್ ಸಾಂಗ್ ಬಪ್ಪಿ ಲಹರಿಯವರ ಕಂಠದಲ್ಲಿ ಮೂಡಿಬಂದಿತ್ತು.









