Bollywood : ಒಂದೇ ಸಿನಿಮಾದಲ್ಲಿ ಸಲ್ಮಾನ್ , ಶಾರುಖ್ , ಹೃತಿಕ್…!!! ಯಾವುದು ಆ ಸಿನಿಮಾ..???
ಒಂದೇ ಸಿನಿಮಾದಲ್ಲಿ ಸಲ್ಮಾನ್ , ಶಾರುಖ್ , ಹೃತಿಕ್…!!! ಯಾವುದು ಆ ಸಿನಿಮಾ..???
ಒಂದು ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಕಾಣಿಸಿಕೊಳ್ತಿದ್ದಾರೆ ಅಂದ್ರೆ ಅಲ್ಲಿ ಡೈರೆಕ್ಟರ್ ರಿಸ್ಕ್ ತೆಗೆದುಕೊಳ್ತಿದ್ದಾರೆ ಎಂತಲೇ ಅರ್ಥ.. ಯಾಕಂದ್ರೆ ಒಬ್ಬರಿಗೆ ಸ್ವಲ್ಪ ಹೆಚ್ಚು ಹೈಪ್ ಸಿಕ್ಕಿ ಮತ್ತೊಬ್ಬರಿಗೆ ಸ್ವಲ್ಪ ಕಡಿಮೆ ಆಯ್ತು ಅಂತ ಅನಿಸಿದ್ರೆ ದೊಡ್ಡ ಫ್ಯಾನ್ ವಾರೇ…. ನಡೆದುಹೋಗುತ್ತೆ….
ಆದ್ರೆ ಬಾಲಿವುಡ್ ನಲ್ಲಿ ಈ ರೀತಿ ಒಂದೇ ಸಿನಿಮಾದಲ್ಲೇ ಇಬ್ಬರು ಮೂವರು ಸ್ಟಾರ್ ಗಳನ್ನ ತೋರಿಸುವ ಪರಿಪಾಠ ಆಗಿನಿಂದಲೂ ರೂಢಿಯಲ್ಲಿದೆ… ಹೆಚ್ಚು ಸಿನಿಮಾಗಳಲ್ಲಿ ಇಬ್ಬರು ಮೂವರು ಸ್ಟಾರ್ ಗಲಿದ್ದೇ ಇರುತ್ತಾರೆ. ಆದ್ರೆ ಸೌತ್ ವಿಚಾರಕ್ಕೆ ಬಂದ್ರೆ ಇದು ಸ್ವಲ್ಪ ರಿಸ್ಕ್.. ಆದ್ರೂ RRR ಸಿನಿಮಾದಲ್ಲಿ ರಾಜಮೌಳಿ ಇಂತಹ ರಿಸ್ಕ್ ತೆಗೆದುಕೊಂಡಿದ್ದಾರೆ.. ಆದ್ರೆ ಅವರು ಅಚ್ಚು ಕಟ್ಟಾಗಿ ಬ್ಯಾಲೆನ್ಸ್ ಮಾಡ್ತಾರೆ ಅನ್ನೋ ನಂಬಿಕೆ ಎಲ್ರಿಗೂ ಇದೆ..
ಇದೀಗ ಬಾಲಿವುಡ್ ನಲ್ಲಿ ಒಂದು ಸೆನ್ಷೇಷನಲ್ ನ್ಯೂಸ್ ಹರಿದಾಡ್ತಿದೆ.. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಒಂದೇ ಚಿತ್ರಕ್ಕಾಗಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ ಅನ್ನೋದು ಬಿ ಟೌನ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿರುವ ಕಬರ್..
bollywood- salman khan , hrithik roshan , sharukh khan in spy univeres
ಅಂದ್ಹಾಗೆ ಈ ಹಿಂದಿನಿಂದಲೂ ಈ ಸುದ್ದಿ ಕೇಳಿ ಬರುತ್ತಿತ್ತು. ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ, ಆದಷ್ಟು ಬೇಗ ಸಿನಿಮಾ ಸೆಟ್ಟೇರಲಿದೆ ಎಂದು. ಅದಕ್ಕೆ ಈಗ ಬಲವಾದ ಪುಷ್ಠಿ ಸಿಕ್ಕಿದೆ..
ನಿರ್ದೇಶಕರಾದ ಆದಿತ್ಯ ಚೋಪ್ರಾ ಅವರು ತಮ್ಮ ಸ್ಪೈ ಯೂನಿವರ್ಸ್ ಚಿತ್ರದ ಶೂಟಿಂಗ್ ಗೆ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದಾರೆ. ಈ ಸಿನಿಮಾಗಾಗಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್ ಅವರನ್ನು ಒಟ್ಟಿಗೆ ಸೇರಿಸುವ ಪ್ರಯತ್ನದಲ್ಲಿರುವುದಾಗಿಯೂ ಮ್ಯಾಗಜಿನ್ ಒಂದಕ್ಕೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ..
ಶಾರುಖ್ ಅಭಿನಯದ ಪಠಾಣ್ , ಹೃತಿಕ್ ರೋಷನ್ ಅಭಿನಯದ ವಾರ್ 2 ಹಾಗೂ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಚಿತ್ರದ ನಂತರ ಸ್ಪೈ ಯೂನಿವರ್ಸ್ ಸೆಟ್ಟೇರಲಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ ಸಿನಿಮಾದಲ್ಲಿ ಸ್ಟಾರ್ ನಟಿಯರು ಕೂಡ ಬಣ್ಣ ಹಚ್ಚಲಿದ್ದಾರಂತೆ.. ಹೌದು ಕತ್ರಿನಾ ಕೈಫ್ , ದೀಪಿಕಾ ಪಡುಕೋಣೆ ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ…