ಚೆನ್ನೈ : ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂದು ಕರೆ ಬಂದಿದ್ದು, ತಲೈವಾ ಮನೆಯ ಮೂಲೆ ಮೂಲೆಯನ್ನು ಶೋಧಿಸಿ ಅದೊಂದು ಹುಸಿ ಕರೆ, ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ರಜಿನಿ ಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ ವ್ಯಕ್ತಿಯ ಪತ್ತೆಗಾಗಿಯೂ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಆರೋಪಿವನ್ನು ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಸಿ ಕರೆ ಮಾಡಲು ಕಾರಣ ಏನಾಗಿರಬಹುದು?
ತಲೈವಾ ಮನೆಯಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೇ ಈ ರೀತಿ ಕರೆ ಮಾಡಲು ಕಾರಣ ಏನಾಗಿರಬಹುದು ಎಂದು ಚರ್ಚೆಗಳನ್ನು ನಡೆಸುತ್ತಾ ಹುಸಿ ಕರೆ ಮಾಡಿದ್ದವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇನ್ನು ಹುಸಿ ಕರೆ ಮಾಡಲು ಕಾರಣ ಏನಾಗಿರಬಹುದು ಎಂಬ ಚರ್ಚೆಗಳು ತಮಿಳು ನೆಲದಲ್ಲಿ ನಡೆಯುತ್ತಲೇ ಇದ್ದು, ಈ ಬಗ್ಗೆ ಪೊಲೀಸರು, ಪ್ರತಿಕ್ರಿಯೆ ನೀಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಮದ್ಯದಂಗಡಿಗಳನ್ನು ತೆರೆಯಬಾರದು ಎಂದು ಸೂಪರ್ ಸ್ಟಾರ್ ರಜನಿಕಾಂತ್ ಆಡಳಿತ ಪಕ್ಷಕ್ಕೆ ಸಲಹೆ ನೀಡಿದ್ದರು. ಇದರ ಹಿನ್ನೆಲೆ ಈ ಬೆದರಿಕೆ ಕರೆಯನ್ನು ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.