ಭಾರತದ ಟೆಸ್ಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಗುರಿಯನ್ನು ಹೊಂದಿದೆ. ನಾಳೆ ಪರ್ತ್ನಲ್ಲಿ ಆರಂಭವಾಗಲಿರುವ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ, ತಂಡವು ಮತ್ತೊಂದು ದೊಡ್ಡ ಆಘಾತವನ್ನು ಅನುಭವಿಸಿದೆ.
ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ ಗಾಯಗೊಂಡು ಮೊದಲು ಸರಣಿಯಿಂದ ಹೊರಗುಳಿದ ನಂತರ, ಇದೀಗ ವೇಗದ ಬೌಲರ್ ಖಲೀಲ್ ಅಹ್ಮದ್ ಕೂಡ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರಿಗೆ ಭಾರತಕ್ಕೆ ಮರಳಲು ಸೂಚಿಸಲಾಗಿದೆ.
ಬಿಸಿಸಿಐ (ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ), ತಂಡದ ಬೌಲಿಂಗ್ ಶಕ್ತಿ ಬಲಪಡಿಸಲು ಯಶ್ ದಯಾಳ್ ಅವರನ್ನು ಖಲೀಲ್ ಅಹ್ಮದ್ ಅವರ ಬದಲಿಗೆ ಆಯ್ಕೆ ಮಾಡಿದೆ. ಯಶ್ ದಯಾಳ್, ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಉತ್ತಮ ಬೌಲಿಂಗ್ನಿಂದ ಗಮನ ಸೆಳೆದಿದ್ದಾರೆ.
ಗಾಯದ ಸಮಸ್ಯೆ ಭಾರತೀಯ ತಂಡದ ಸಮತೋಲನಕ್ಕೆ ದೊಡ್ಡ ಸವಾಲನ್ನು ತಂದಿದ್ದು, ಸರಣಿಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿಯಿರುವ ಸಂದರ್ಭದಲ್ಲಿ ತಂಡಕ್ಕೆ ಹೊಸ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಆಸ್ಟ್ರೇಲಿಯಾದ ಬಲಿಷ್ಠ ತಂಡದ ಎದುರು ಭಾರತ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ನಾಳೆ ಪರ್ಥ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಬ್ಯಾಟ್ಸ್ಮನ್ಗಳಿಗೆ ಸವಾಲಾದ ಪಿಚ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪೈಪೋಟಿ ಇನ್ನೂ ಕುತೂಹಲಕಾರಿಯಾಗಿದೆ.