ಜನರಿಗೆ 14 ಕೋಟಿ ರೂಪಾಯಿ ವಂಚಿಸಿದ್ದ ಬಾರ್ಡರ್ ಫೋನ್ ಆಫೀಸರ್ ಅರೆಸ್ಟ್ ಆಗಿರುವ ಘಟನೆ ನಲ್ಲಿ ಗುರ್ಗಾಂವ್ ನಲ್ಲಿ ನಡೆದಿದೆ.. ಗುರ್ಗಾಂವ್ ಮನೇಸರ್ನುಲ್ಲಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಪ್ರಧಾನ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಬಿಎಸ್ಎಟಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಯಾದವ್, ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಂತೆ ನಟಿಸಿ ಜನರಿಗೆ 125 ಕೋಟಿ ರೂ. ವಂಚಿಸಿದ್ದರು.
ಪೊಲೀಸರಿಗೆ ಈ ಕುರಿತು ಮಾಹಿತಿ ಸಿಕ್ಕಿದ್ದು, ಆತನನ್ನು ಬಂಧಿಸಿದ್ದಾರೆ. ದಾಳಿಯ ವೇಳೆ 14 ಕೋಟಿ ರೂ. 1 ಕೋಟಿ ಮೌಲ್ಯದ ಚಿನ್ನಾಭರಣಗಳು, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ ಏಳು ಐಷಾರಾಮಿ ಕಾರುಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಧಿಕಾರಿಗೆ ಸಹಾಯ ಮಾಡಿದ ಪತ್ನಿ ಮಮತಾ ಯಾದವ್, ಸಹೋದರಿ ರಿತು ಮತ್ತು ಸಹಚರನನ್ನು ಸಹ ಬಂಧಿಸಿದ್ದಾರೆ.
ಗುರ್ಗಾಂವ್ ಪೊಲೀಸ್ ಎಸಿಪಿ ಕ್ರೈಂ ಪ್ರೀತ್ ಪಾಲ್ ಸಿಂಗ್ ಈ ಕುರಿತು ಮಾತನಾಡಿದ್ದು, ಐಪಿಎಸ್ ಅಧಿಕಾರಿಯಂತೆ ಯಾದವ್ ನಟಿಸಿದ್ದು, ಅವರು ಎನ್ಎ್ಸ್ಜಿರ ಕ್ಯಾಂಪಸ್ನ,ಲ್ಲಿ ನಿರ್ಮಾಣ ಗುತ್ತಿಗೆ ಪಡೆಯುವ ನೆಪದಲ್ಲಿ ಜನರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಅವರು ವಂಚಿಸಿದ ಎಲ್ಲ ಹಣವನ್ನು ಎನ್ಎನಸ್ಜಿತ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾಯಿಸಿದ್ದಾರೆ. ಈ ಖಾತೆಯನ್ನು ಆಕ್ಸಿಸ್ ಬ್ಯಾಂಕ್ನಎಲ್ಲಿ ಮ್ಯಾನೇಜರ್ ಆಗಿರುವ ಅವರ ಸಹೋದರಿ ರಿತು ಯಾದವ್ ತೆರೆದಿದ್ದಾಳೆ ಎಂದು ತಿಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಪ್ರವೀಣ್ ಯಾದವ್ 60 ಲಕ್ಷ ನಷ್ಟ ಅನುಭವಿಸಿದ್ದು, ಪರಿಣಾಮ ಜನರನ್ನು ವಂಚಿಸಿ ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರು ಎಂದು ಹೇಳಿದ್ದಾರೆ.