ಚಿಕ್ಕಬಳ್ಳಾಪುರ : ಬೋರ್ ವೆಲ್ ಲಾರಿ ಪಲ್ಟಿಯಾಗಿ ಹೊರರಾಜ್ಯಗಳ ಮೂವರು ಕಾರ್ಮಿಕರು ಮೃತಪಟ್ಟು, ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.
ಹೊಸಹುಡ್ಯ ಗ್ರಾಮದ ರೈತ ಬೈರಾರೆಡ್ಡಿ ಅವರ ಜಮೀನಿನಲ್ಲಿ ಈ ಘಟನೆ ನಡೆದ್ದು, ಕೊಳವೆಬಾವಿ ಕೊರೆಯಲು ಹೋಗುತ್ತಿದ್ದ ವೇಳೆ ಕಿರಿದಾದ ಮಣ್ಣಿನ ದಾರಿಯಲ್ಲಿ ಆಯತಪ್ಪಿ ಲಾರಿ ಮಗುಚಿದೆ. ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಇಬ್ಬರು, ಛತ್ತಿಸಗಡದ ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.