ಬಾಸ್ ಬಾಸ್ ಸಿದ್ದು ಬಾಸ್ : ಹುಲಿಯಾಗೆ ಭರ್ಜರಿ ಸ್ವಾಗತ siddaramaiah
ಚಾಮರಾಜನಗರ : ಮೇಕೆದಾಟು ಪಾದಯಾತ್ರೆ ಕುರಿತ ಪೂರ್ವಭಾವಿ ಸಭೆಗೆ ಚಾಲನೆ ನೀಡಲು ಚಾಮರಾಜನಗರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು.
ಈ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗರು ಬಾಸ್ ಬಾಸ್ ಸಿದ್ದು ಬಾಸ್. ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಹುಲಿಯಾ ಸಿದ್ದರಾಮಯ್ಯ ಎಂದು ಅವರ ಅಭಿಮಾನಿಗಳು ಜೈಕಾರ ಹಾಕಿದರು.
ಶ್ರೀಚಾಮರಾಜೇಶ್ವರ ಸ್ವಾಮಿ ದೇವಾಲಯಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದರು.
ಈ ವೇಳೆ ದೇವಾಲಯದ ಹೊರಗೆ ಮತ್ತು ಒಳಗೆ ಸಿದ್ದರಾಮಯ್ಯ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿ ದೇವಾಲಯ ಪ್ರಾಂಗಣದಲ್ಲೇ ಬಾಸ್ ಬಾಸ್ ಸಿದ್ದು ಬಾಸ್, ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಹುಲಿಯಾ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ದೇವಾಲಯ ಪ್ರದಕ್ಷಿಣೆ ಮಾಡುವಾಗಲೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ನೃತ್ಯ ಮಾಡಿ ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದಲ್ಲದೇ, ಮುಂದಿನ ಸಿಎಂ ಎಂದು ಕೂಗಿದರು.
ಮತ್ತೆ ಅಲ್ಲಿಂದ ಹೊರಡುವ ವೇಳೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಸಿದ್ದು ಕೈ ಬೀಸಿದರು. ಇದಾದ ಬಳಿಕ, ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ಪಡೆದು ಬೀಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಇಬ್ಬರು ನಾಯಕರಿಗೆ ಸಾಥ್ ಕೊಟ್ಟರು.









